ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರ ವಿಚಾರ: ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಕೆ ಆರೋಪ: ‘ಇ.ಡಿ. ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಬಹಿರಂಗ’-ವಿಪಕ್ಷ ನಾಯಕ ಆರ್.ಅಶೋಕ್

ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕೆ ವಿನಿಯೋಗವಾಗಬೇಕಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ ಹಂಚಲು ಬಳಕೆಯಾಗಿದೆ ಎಂಬ ಆಘಾತಕಾರಿ ವಿಷಯ ಇ.ಡಿ. ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಬಹಿರಂಗವಾಗಿದೆ ಎಂದು ವಿರೋಧ‌ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ನಿಗಮದ ಹಣವನ್ನ ಮಾಜಿ ಸಚಿವ @BNagendraINC ಅವರು ತಮ್ಮ ಮನೆಯ ಕರೆಂಟ್ ಬಿಲ್ ಕಟ್ಟಲು, ವಾಹನಗಳಿಗೆ ಡೀಸೆಲ್ ತುಂಬಿಸಲು, ಕುಟುಂಬ ಸದಸ್ಯರಿಗೆ ವಿಮಾನ ಟಿಕೆಟ್ ಖರೀದಿಸಲು, ಮನೆ ಕೆಲಸದವರಿಗೆ ಸಂಬಳ ನೀಡಲೂ ಸಹ ಬಳಸಿದ್ದಾರೆ ಎಂಬ ವಿಷಯವೂ ಬೆಳಕಿಗೆ ಬಂದಿದ್ದು, ಇವುಗಳಿಗೆ ಸಾಕ್ಷಿ ಸಹ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

ದಲಿತರಿಗೆ ಸೇರಬೇಕಾದ ಹಣದಲ್ಲಿ ಇಷ್ಟು ದೊಡ್ಡ ಭ್ರಷ್ಟಚಾರ ನಡೆದಿರುವಾಗ ‘ಆತ್ಮಸಾಕ್ಷಿ’ ಇರುವ ಯಾವ ಮುಖ್ಯಮಂತ್ರಿಯೂ ಒಂದು ಕ್ಷಣವೂ ತಮ್ಮ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.

ಆದರೆ ಆತ್ಮಸಾಕ್ಷಿಗಿಂತ ಅಧಿಕಾರವೇ ದೊಡ್ಡದು, ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ದೊಡ್ಡದು, ಅಂತಃಕರಣಕ್ಕಿಂತ ಅಹಂಕಾರವೇ ದೊಡ್ಡದು ಎನ್ನುವ ಮನಸ್ಥಿತಿ ಇರುವವರು ಈಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಅದೇ ಕನ್ನಡಿಗರ ದೌರ್ಭಾಗ್ಯ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *