ಸಾಲ ವಾಪಸ್ಸು ಕೇಳಿದ್ದಕ್ಕೆ ಕಾರ್ಪೆಂಟರ್ ನಾಗೇಶ್ ಆಚಾರ್ ಎಂಬುವವರನ್ನು ದಿನಾಂಕ 27.11.2021 ರಂದು ರಾತ್ರಿ ಮೂಡಿಗೆರೆ ತಾಲೂಕಿನ ಬಿದುರುತಳ ಅರಣ್ಯ ಪ್ರದೇಶದಲ್ಲಿ ಬಂದೂಕಿನಿಂದ ಗುಂಡು ಹಾರಿಸಿ, ಕೊಲೆ ಮಾಡಿ ಹೆಣ ಹೂತು ಹಾಕಿದ್ದ ಪ್ರಕರಣದಲ್ಲಿನ ಎರಡು ಜನ ಆರೋಪಿಗಳಿಗೆ ಘನ ನ್ಯಾಯಾಲಯವು ಶಿಕ್ಷೆ ಮತ್ತು ದಂಡ ವಿಧಿಸಿರುತ್ತದೆ.
ಪ್ರಕರಣದಲ್ಲಿನ 1ನೇ ಆರೋಪಿಯಾದ ಕೃಷ್ಣೇಗೌಡ ಈತನಿಗೆ ಜೀವಾವಧಿ ಶಿಕ್ಷೆ ಮತ್ತು ರೂ. 50,000.00 ದಂಡ ಮತ್ತು 2ನೇ ಆರೋಪಿಯಾದ ಉದಯ ಬಿ.ಸಿ ಈತನಿಗೆ 3 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 3,000.00 ದಂಡ ವಿಧಿಸಿ ದಿನಾಂಕ 10.10.2024 ರಂದು ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು ತೀರ್ಪು ನೀಡಿರುತ್ತದೆ.
ಪ್ರಕರಣದ ತನಿಖೆಯನ್ನು ಸಿಪಿಐ ಸೋಮಶೇಖರ್ ಜಿ ಸಿ ರವರು ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ತನಿಖಾ ಸಹಾಯಕರಾಗಿ ಸಿಪಿಸಿ ವೈಭವ್ ಮತ್ತು ಸಿಪಿಸಿ ಮನು ಹಾಗೂ ನ್ಯಾಯಾಲಯದ ಕರ್ತವ್ಯನ್ನು ಎಎಸ್ಐ ಯತೀಶ್ ರವರು ನಿರ್ವಹಿಸಿದ್ದು, ಸರ್ಕಾರಿ ಅಭಿಯೋಜಕರಾದ ಹೆಚ್ ಎಸ್ ಲೋಹಿತಾಶ್ವಚಾರ್ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಕಚೇರಿ ತಿಳಿಸಿದೆ.