
ಇತ್ತೀಚೆಗೆ ನೆಲಮಂಗಲದಿಂದ ದೊಡ್ಡಬಳ್ಳಾಪುರ ಕಡೆಗೆ ಬರುವ ಬಸ್ ಗಳು ವಿಳಂಬ ಮಾಡುತ್ತಿದ್ದು, ಇದರಿಂದ ಮಧುರೆ ಹೋಬಳಿಯ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಕಾಡನೂರು ಕೈಮರದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದೂ ಸಹ ಸುಮಾರು ಎರಡು ಗಂಟೆ ಕಾದು ಕುಳಿತರು ಸಹ ಸೂಕ್ತ ಸಮಯಕ್ಕೆ ಬಸ್ ಗಳು ಬಂದಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಪರದಾಡಿದರು. ಸುಮಾರು ಎರಡು ಗಂಟೆಗಳು ಕಾಯುವಿಕೆ ನಂತರ ಒಂದು ಕೆಎಸ್ ಆರ್ ಟಿಸಿ ಬಂದರೂ ನಿಂತುಕೊಳ್ಳಲು ಜಾಗವಿಲ್ಲದೇ ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಹೇಗೋ ಬಸ್ ಹಿಡಿದು ಹೋಗೋಣ ಎಂದರೆ ಜಾಗವಿಲ್ಲ. ಬಸ್ ಹತ್ತಲು ಹೋದಾಗ ಜಾರಿ ಬೀಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ ಎಂದು ವಿದ್ಯಾರ್ಥಿಯೊಬ್ಬ ತನ್ನ ಅಳಲು ತೋಡಿಕೊಂಡರು.
ಇನ್ನಾದರೂ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದರು.
