ಎಸ್ಎಫ್ಐನ ರಾಜ್ಯ ಸಹ ಕಾರ್ಯದರ್ಶಿಯಾಗಿ ಸುರೇಶ್ ಬಾಬು ಆಯ್ಕೆ

ಕೋಲಾರ:  ಭಾರತ ವಿಧ್ಯಾರ್ಥಿ ಫೆಡರೇಷನ್‌ನ (ಎಸ್‌ಎಫ್‌ಐ) ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿಯಾಗಿ ಸುರೇಶ್ ಬಾಬು ಆಯ್ಕೆಯಾಗಿದ್ದಾರೆ.

ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಇಬಿ ಸಮುದಾಯ ಭವನದಲ್ಲಿ ನಡೆದ ಎಸ್‌ಎಫ್‌ಐ ಸಂಘಟನೆಯ 16 ನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದ ಪ್ರತಿನಿಧಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

SFi ರಾಜ್ಯ ಸಹ ಕಾರ್ಯದರ್ಶಿ ಸುರೇಶ್ ಬಾಬು ಮಾತನಾಡಿ, ಇಡೀ ಕರ್ನಾಟಕ ವಿದ್ಯಾರ್ಥಿಗಳು ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿರುತ್ತಾರೆ. ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮನ್ನು ಆಯ್ಕೆ ಮಾಡಿದ ಇಡೀ ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ಈ ಸಮ್ಮೇಳನದಲ್ಲಿ ನಿರ್ಧಾರವಾದಂತೆ ವಿದ್ಯಾರ್ಥಿ ಚಳುವಳಿ ಎಸ್ಎಫ್ ಐನ್ನು ಇಡೀ ಕರ್ನಾಟಕದ್ಯಾಂತ ಗಟ್ಟಿಗೊಳಿಸಲು ಮುನ್ನಡೆಯುತ್ತೇವೆ ಎಂದರು.

ಸಮ್ಮೇಳನದ ಘೋಷಣೆಯಾದ ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ, ಸಮಾನತೆ, ಸಹೋದರತ್ವದ ಗುರಿಗಳನ್ನು ಸಾಧಿಸಲು ಇಡೀ ಕರ್ನಾಟಕದ್ಯಾಂತ ಧ್ವನಿ ಎತ್ತುತ್ತೇವೆ. ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಕುರಿತು ಇಡೀ ಪ್ರತಿಭಟಿಸುತ್ತೇವೆ ಎಂದರು.

Leave a Reply

Your email address will not be published. Required fields are marked *

error: Content is protected !!