ನಗರದ ಖಾಸಗಿ ಶಾಲೆಯ ಮಕ್ಕಳು ಹೇಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೂ ಹಾಗೆಯೇ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೂ ಸಹ ಎಲ್ಲಾ ಸೌಲಭ್ಯಗಳು ದೊರೆಯಬೇಕು ಎಂಬುದನ್ನು ಗುರಿಯಾಗಿಟ್ಟುಕೊಂಡು ವಿಶೇಷವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಸಂಸ್ಥೆ ಮುನ್ನಡೆದಿದೆ, ನಮ್ಮ ಕಂಪನಿಯು ನೀಡುತ್ತಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಕಂಪನಿಯ ಉಪಾಧ್ಯಕ್ಷರಾದ ಜಿ. ಎ. ಶ್ರೀನಿವಾಸ್ ಮನವಿ ಮಾಡಿದರು.
ತಾಲ್ಲೂಕಿನ ಮಜರಾಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಗಾರ್ಮೆಂಟ್ಸ್ ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಚಾರಿಟಬಲ್ ಫೌಂಡೇಶನ್ ವತಿಯಿಂದ ಕುಡಿಯುವ ನೀರಿನ ( RO) ಘಟಕ ಮತ್ತು ಗಣಕಯಂತ್ರಗಳು ಹಾಗೂ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಅಂಜಿನಪ್ಪ ಅವರು ಮಾತನಾಡಿ ಸದರಿ ಶಾಲೆಯಲ್ಲಿ ಸುಮಾರು 100 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ , ನಮ್ಮ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿನ ಘಟಕ ಮತ್ತು ಗಣಕಯಂತ್ರ ಹಾಗೂ ಪ್ರಯೋಗಾಲಯವನ್ನು ಕೊಡುಗೆ ನೀಡಿರುವ ಗೋಕಲ್ ದಾಸ್ ಎಕ್ಸ್ ಪೋರ್ಟ್ಸ್ ಸಂಸ್ಥೆಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋಕುಲ್ ದಾಸ್ ನ ಪ್ರದಾನ ವ್ಯವಸ್ಥಾಪಕರು ಗಿರೀಶ್.ಆರ್, ಮಾನವ ಸಂಪನ್ಮೂಲ ವಿಭಾಗದ ವಿಶ್ವನಾಥ್ ಡಿ.ಎಸ್, ಮಹಾಂತೇಶ್ ಬಂಗಾರಿ ಪರಿಸರ ಆರೋಗ್ಯ ಮತ್ತು ಸುರಕ್ಷತೆಯ ಮ್ಯಾನೇಜರ್ , ಹಾಗು ಮಜರಾಹೊಸಹಳ್ಳಿ ಶಾಲೆಯ ಸಹಶಿಕ್ಷಕರು ಹಾಗೂ ಊರಿನ ಹಿರಿಯರು ಹಾಜರಿದ್ದರು.