ಹಸಿವು, ಆನಾರೋಗ್ಯ, ಅಪಘಾತದಲ್ಲಿ ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ನೆರವಾದ ದಂಪತಿ: ಯಾವ ಸ್ವಾರ್ಥವೂ ಇಲ್ಲದೆ 200ಕ್ಕೂ ಅಧಿಕ ಬೀದಿನಾಯಿಗಳ ಸಂರಕ್ಷಣೆ

ಸಾಮನ್ಯವಾಗಿ ಬೀದಿನಾಯಿ ಅಂದರೆ ಸಾಕು ಜನರಿಗೆ ಕಚ್ಚುತ್ತೆ, ಪ್ರತಿದಿನ ಊಟ ಹಾಕಬೇಕು, ಗಲೀಜು ಮಾಡುತ್ತೆ ಎಂದು ದೂರ ಹೋಗುತ್ತಾರೆ. ಆದರೆ, ಇಲ್ಲೊಂದು ದಂಪತಿ ಯಾವುದೇ ಸ್ವಾರ್ಥವಿಲ್ಲದೇ ಬೀದಿ ನಾಯಿಗಳ ಸಂರಕ್ಷಣೆಗಾಗಿಯೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಹಸಿವಿನಿಂದ, ಅನಾರೋಗ್ಯದಿಂದ ಮತ್ತು ಅಪಘಾತವಾದ ಬೀದಿನಾಯಿಗಳಿಗೆ ಚಿಕಿತ್ಸೆ ಕೊಡಿಸಿ, ಶೇಲ್ಟರ್ ನಲ್ಲಿ ರಕ್ಷಣೆ ನೀಡಲಾಗುತ್ತಿದೆ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಇನ್ನೆಲ್ಲೋ ಯಾರದ್ದೊ‌ ವಾಹನಕ್ಕೆ ಅಕಸ್ಮಿಕವಾಗಿ ಸಿಲುಕಿ ಗಾಯಗೊಂಡ ನಾಯಿಗಳು ಆತನ ಕಣ್ಣಿಗೆ ಅಥವಾ ಗಮನಕ್ಕೆ ಬಂದರೆ ಸಾಕು ಅಲ್ಲಿಗೆ ದೌಡಾಯಿಸಿ ಆ ಗಾಯಗೊಂಡ ನಾಯಿಗೆ ಚಿಕಿತ್ಸೆ ಕೊಡಿಸಿ ಆಶ್ರಯ‌ ನೀಡೋದೆ ಈತನ ಕೆಲಸ.

ಸುಮಾರು ಒಂದು ಎಕರೆ ಖಾಲಿ ಜಮೀನಿನಲ್ಲಿ ಸ್ವತಂತ್ರವಾಗಿ, ಸ್ವಚ್ಚಂದವಾಗಿ ಓಡಾಡುತ್ತಿರುವ ನೂರಾರು ಬೀದಿ ನಾಯಿಗಳು.. ಅಪಘಾತದಲ್ಲಿ ಸೊಂಟ, ಕಾಲು ಸೇರಿದಂತೆ ಅಂಗಾಂಗ ಡ್ಯಾಮೇಜ್ ಮಾಡಿಕೊಂಡು ಹಾರೈಕೆಯಾಗುತ್ತಿರುವ ಮೂಕ ಪ್ರಾಣಿಗಳು…

ಈ ಬೀದಿ ಬದಿಯ ಪ್ರಾಣಿಗಳಿಗೆ ಸ್ವಂತ ದುಡಿದ ಹಣದಿಂದ ಆಹಾರ ಸಿದ್ದಪಡಿಸುತ್ತಿರುವ ದಂಪತಿ…. ಹೌದು ಅಂದಹಾಗೆ ಮೂಖ ಪ್ರಾಣಿಗಳ ಹಾರೈಕೆಯಲ್ಲಿ ದಂಪತಿಗಳು ತಮ್ಮನ್ನ ತಾವು ತೋಡಗಿಸಿಕೊಂಡಿರುವುದು ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಬ್ಯಾತ ಗ್ರಾಮದ ಬಳಿ.

ಈ ದಂಪತಿ ಮೂಲತಃಹ ಪಂಜಾಬ್ ರಾಜ್ಯದವರು. ಸೂರ್ಯ ಪ್ರತಾಪ್ ಸಿಂಗ್ ಮತ್ತು ಅಂಜು ಅನ್ನೂ ಈ ದಂಪತಿ ಕಳೆದ ಕೆಲ ವರ್ಷಗಳಿಂದೆ ಮನೆಯಲ್ಲಿ ನಾಯಿಯನ್ನ ಸಾಕಿದ್ದು, ಮನೆಯಿಂದ ತಪ್ಪಿಹೋದ ನಾಯಿ ಅಪಘಾತದಲ್ಲಿ ಗಾಯಗೊಂಡು ದುರ್ಮರಣಕ್ಕೀಡಾಗುತ್ತದೆ. ಹೀಗಾಗಿ ತಮ್ಮ ಸಾಕು ನಾಯಿ ನರಳಾಡಿ ಸಾವನ್ನಪಿದ್ದನ್ನ ಕಂಡ ದಂಪತಿ ಬೇರೆ ನಾಯಿಗಳು ಈ ರೀತಿ ಹಾರೈಕೆಯಿಲ್ಲದೆ ಸಾವನ್ನಪ್ಪಬಾರದು ಎಂದು ನಿರ್ಧಾರ ಮಾಡಿದ್ದು, ಅಂದಿನಿಂದ ನಾಯಿಗಳನ್ನ ಮಕ್ಕಳಂತೆ ಸಾಕಲು ಮುಂದಾಗಿದ್ದಾರೆ.

ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಗಾಯಗೊಂಡ ಮತ್ತು ಅಪಘಾತಕ್ಕೀಡಾದ ನಾಯಿಗಳನ್ನ ತಂದು ಸಾಕುತ್ತಾ ಅವುಗಳ ಹಾರೈಕೆ ಮಾಡುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ನಾಯಿಗಳನ್ನ ಸಾಕಾಣಿಕೆ ಮಾಡುತ್ತಿರುವುದಕ್ಕೆ ಕೆಲವರು ದಂಪತಿಗಳ ಮೇಲೆ ಹಲ್ಲೆ ಮಾಡಿದ್ದರಂತೆ. ಈ ಹಿನ್ನೆಲೆ ಈ ದಂಪತಿ ಸಿಟಿ ಔಟ್ ಸ್ಕಟ್ಸ್ ಗೆ ಬಂದಿದ್ದು, ರೈತರಿಂದ 1 ಎಕರೆ ಜಮೀನನ್ನ ವರ್ಷಕ್ಕೆ 60 ಸಾವಿರ ರೂಪಾಯಿಯಂತೆ ಬಾಡಿಗೆಗೆ ಪಡೆದುಕೊಂಡಿದ್ದಾರೆ. ಜೊತೆಗೆ ಬಾಡಿಗೆ ಪಡೆದ ಜಮೀನಿನಲ್ಲಿ ಶೇಡ್ ಮತ್ತು ಕಾಂಪೋಂಡ್ ನಿರ್ಮಾಣ ಮಾಡಿಕೊಂಡು ಸುಮಾರು 200ಕ್ಕೂ ಅಧಿಕ ನಾಯಿಗಳು, ಮೊಲ, ಬೆಕ್ಕು, ಹಸು ಅಂತಹ ಮೂಕ ಪ್ರಾಣಿಗಳನ್ನ ಪೋಷಣೆ ಮಾಡುತ್ತಿದ್ದಾರೆ.

ಅಲ್ಲದೆ, ಈ  ಸೂರ್ಯ ಪ್ರತಾಪ್ ಸಿಂಗ್ ಮಾರ್ಕೆಂಟಿಗ್ ಕೆಲಸ ಸಹ ಮಾಡಿಕೊಂಡು ಬಂದ ಹಣದಿಂದ ನಿತ್ಯ ಮೂಕ ಪ್ರಾಣಿಗಳಿಗೆ ಆಹಾರ ತಯಾರಿಸಿ ಶೇಡ್ ಮಾತ್ರವಲ್ಲದೆ ರಸ್ತೆ ಬದಿಯಲ್ಲಿನ ಪ್ರಾಣಿಗಳಿಗೆ ನೀಡುತ್ತಿದ್ದಾರೆ. ಇನ್ನೂ ದಂಪತಿಯ ಪ್ರಾಣಿ ಪ್ರೀತಿಯನ್ನ ಕಂಡು ಕೆಲವರು ಆಗಾಗ ಸಹಾಯ ಸಹ ಮಾಡ್ತಿದ್ದು ಅನಾರೋಗ್ಯದಿಂದ ಬಳಲುತ್ತಿರುವ ದಂಪತಿ ನಾವಿರುವವರಗೂ ಮೂಖ ಪ್ರಾಣಿಗಳ ಹಾರೈಕೆ ಮಾಡ್ತಿವಿ ಅಂತ ಶಪಥ ಮಾಡಿದ್ದಾರೆ.

ಒಟ್ಟಾರೆ, ಕಷ್ಟಾ ಅಂದ್ರೆ ಹೆತ್ತ ತಂದೆ ತಾಯಿ ಸೇರಿದಂತೆ ಒಡ ಹುಟ್ಟಿದವರನ್ನು ನೋಡಿಕೊಳ್ಳದ ಈ ಕಾಲದಲ್ಲಿ ಗಾಯಗೊಂಡ ಪ್ರಾಣಿಗಳನ್ನ ಹೊತ್ತು ತಂದು ಮಕ್ಕಳಂತೆ ಹಾರೈಕೆ ಮಾಡುತ್ತಾ ಅವುಗಳ ಪೋಷಣೆ ಮಾಡ್ತಿರುವ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.

Leave a Reply

Your email address will not be published. Required fields are marked *

error: Content is protected !!