ಕೋಲಾರ: ಗಣೇಶ ವಿಸರ್ಜನೆಯನ್ನು ಕೃಷಿ ಹೊಂಡಗಳಲ್ಲಿ ಮಾಡದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರ ಪತ್ರದ ಮುಖಾಂತರ ಜಾಗೃತಿ ಮೂಡಿಸಿ ಟೆಮೋಟೋ ಹಾಗೂ ಗಡ್ಡೆಕೋಸಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೂ 2 ಲಕ್ಷ ಪರಿಹಾರ ನೀಡುವಂತೆ ರೈತ ಸಂಘದಿಂದ ಸಹಾಯಕ ಕೃಷಿ ನಿರ್ದೇಶಕರ ಮೂಲಕ ಕೃಷಿ ಮಂತ್ರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಿರುವ ರೈತರಿಗೆ ಅನುಕುಲವಾಗುವಂತಹ ಕೃಷಿ ಹೊಂಡಾಗಳು ಸಮರ್ಪಕವಾಗಿ ನಿರ್ವಹಣೆ ಇಲ್ಲದೆ, ಮೃತ್ಯ ಕೂಪಗಳಾಗಿ ಮಾರ್ಪಪಟ್ಟಿರುರುವುದು ದುರಾದೃಷ್ಟಕರ ಬಾಳಿ ಭವಿಷ್ಯದ ಜೀವನ ಸಾಗಿಸಬೇಕಾದ ನೂರಾರು ಮಕ್ಕಳು ಕೃಷಿ ಹೊಂಡದಲ್ಲಿ ಈಜಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ನೂರಾರು ಉದಾಹರಣೆಗಳು ಕಣ್ಣು ಮುಂದೆಯೇ ಇದ್ದರೂ ಕೃಷಿ ಅಧಿಕಾರಿಗಳು,. ಕೃಷಿ ಹೊಂಡಾಗಳಿಗೆ ಬೇಲಿ ಅಳವಡಿಸಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಪೊಲೀಸ್ ಇಲಾಖೆ, ಆದೇಶದಂತೆ ಕಡ್ಡಾಯವಾಗಿ ಅನುಮತಿ ಪಡೆದು ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯೋಜಕರು ಜಾಗೃತಿ ಮೂಡಿಸಬೇಕು. ಕೃಷಿ ಹೊಂಡಗಳಲ್ಲಿ ಮಕ್ಕಳು ಗಣೇಶ ವಿಸರ್ಜನೆ ಮಾಡದಂತೆ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ರೈತರ ಅವ್ಯವಸ್ಥೆ ಕೃಷಿ ಇಲಾಖೆಯ ಬೇಜವಾಬ್ದಾರಿಯನ್ನು ಬಂಡವಾಳವಾಗಿಸಿಕೊಂಡಿರುವ ಆಂಧ್ರ ತಮಿಳುನಾಡಿಯನಲ್ಲಿ ನಿಷೇದವಾಗಿರುವ ನಕಲಿ ಔಷಧಿಗಳನ್ನು ಗಡಿಭಾಗದ ಕೆಲವು ಅಂಗಡಿಗಳ ಮಾಲೀಕರ ಜೊತೆ ಶಾಮೀಲಾಗಿ ಹೆಚ್ಚಿನ ಹಣ ಬಳಸಬಹುದು ಎಂಬ ದುರಾಸೆಯಿಂದ ಟೆಮೋಟೋ ಮತ್ತು ಗಡ್ಡೆ ಕೋಸಿಗೆ ಗುಣಮಟ್ಟದ ಬಹು ರಾಷ್ಟ್ರೀಯ ಔಷಧಿ ಕಂಪನಿಗಳ ಹೆಸರಿನಲ್ಲಿ ನಕಲಿ ಬಯೋ ಔಷಧಿಗಳನ್ನು ರಾತ್ರಿ ವೇಳೆಯಲ್ಲಿ ಮಾರಾಟ ಮಾಡುತ್ತಿರುವುದು ದುರ ದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ 5 ವರ್ಷಗಳಿಂದ ಜಿಲ್ಲೆಯ ಟೆಮೊಟೋ ಹಾಗೂ ಕೋಸು ಬೆಳೆಗಾರರ ಜೀವ ಹಿಂಡುತ್ತಿರುವ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಂತಹ ಬೆಳೆ ಕಣ್ಣು ಮುಂದೆಯೇ ರೋಗಗಕ್ಕೆ ತುರ್ತ್ತಾಗಿ ನಿಯಂತ್ರಣಕ್ಕೆ ಬಾರದೆ ಸಂಕಷ್ಟದಲ್ಲಿರುವ ರೈತರ ಸಮಸ್ಯೆಯನ್ನು ಕೃಷಿ ಇಲಾಖೆ ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ.? 10 ರೂಪಾಯಿ ಸೊಳ್ಳೆಬತ್ತಿಯಲ್ಲಿ ಕನಿಷ್ಠ 70 ರಷ್ಟು ಸೊಳ್ಳೆ ಮನೆಯಲ್ಲಿ ಸಾಯುತ್ತವೆ. ಆದರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಖರೀದಿ ಮಾಡಿ ಸಿಂಪರಣೆ ಮಾಡುವ ಔಷಧಿಗಳಿಂದ ಕನಿಷ್ಠ ತೋಟದ ಎಲೆಯ ಮೇಲೆ ಇರುವ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆಯಾಗಿದ್ದರೂ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕಲು ಕಾರಣವೇಣು ಎಂದು ಪ್ರಶ್ನೆ ಮಾಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಕಿರಣ್, ಚಾಂದ್‌ಪಾಷ, ಕದರಿನತ್ತ ಅಪ್ಪೋಜಿರಾವ್, ಕಾಮಸಮುದ್ರ ಮುನಿಕೃಷ್ಣ, ಮುನಿರಾಜು, ವಿಶ್ವ, ರಾಮಸಾಗರ ವೇಣು, ಪಾರುಕ್, ವಿಜಯ್‌ಪಲ್, ವಿಶ್ವ, ಮುನಿಯಪ್ಪ, ಗಿರೀಶ್, ಶೈಲಜ, ರತ್ನಮ್ಮ, ಭಾಗ್ಯಮ್ಮ, ವೆಂಕಟಮ್ಮ, ಮುನಿರತ್ನಮ್ಮ, ಗೌರಮ್ಮ, ಮುಂತಾದವರು ಇದ್ದರು.