ಮೆಕ್ಕೆ ಜೋಳದ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ ಆರೋಪಿ ಬಂಧನ

ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಸರಹದ್ದಿನ ದಿಂಬಾರ್ಲಹಳ್ಳಿ-ದಾಸಾರ್ಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಮಾಲು ವಶಕ್ಕೆ ಪಡೆದುಕೊಂಡಿದ್ದಾರೆ.

ದಿಬ್ಬೂರಹಳ್ಳಿ ಠಾಣಾ ಸಿಬ್ಬಂದಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಠಾಣಾಧಿಕಾರಿಗಳು ಅಕ್ರಮವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಟಿ.ವೆಂಕಟಪುರ ಗ್ರಾಮದ ಜನಮಡುಗಪ್ಪ ಅಲಿಯಾಸ್ ಲಂಬು ಬಿನ್ ಲೇಟ್ ನಾರಾಯಣಪ್ಪ (55) ರವರ ಜಮೀನಿನಲ್ಲಿ ಮೆಕ್ಕೆ ಜೋಳದ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ್ದು, ಸ್ಥಳದಲ್ಲಿ ದಾಳಿ ಮಾಡಿ 4 ಕೆಜಿ 70 ಗ್ರಾಂ ತೂಕದ ಸುಮಾರು 1,05,000 ರೂ ಬೆಲೆಬಾಳುವ ಗಾಂಜಾ ಗಿಡಗಳನ್ನು ಆರೋಪಿ ಸಹಿತ ವಶಕ್ಕೆ‌ಪಡೆದುಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಎಂ ಶ್ರೀನಿವಾಸ್, ದಿಬ್ಬೂರಳ್ಳಿ ಪೊಲೀಸ್ ಠಾಣಾ ಆರಕ್ಷಕ ಉಪ ನಿರೀಕ್ಷಕಿ ಶ್ಯಾಮಲ, ಪೊಲೀಸ್ ಕಾನ್ ಸ್ಟೇಬಲ್ ಗಳಾದ ಮಂಜುನಾಥ, ನರಸಿಂಹಯ್ಯ, ಕೃಷ್ಣಪ್ಪ, ಚಂದ್ರಶೇಖರ್, ಪ್ರತಾಪ್.ಎ.ಆರ್, ಶ್ರೀನಿವಾಸಮೂರ್ತಿ, ಶಶಿಕುಮಾ‌ರ್ ಹಾಗೂ ತನಿಖಾ ಸಹಾಯಕ ಸಿಬ್ಬಂದಿ ಸಂತೋಷಕುಮಾರ್, ವಸಂತಕುಮಾ‌ರ್ ದಾಳಿ ವೇಳೆ ಇದ್ದರು.

Leave a Reply

Your email address will not be published. Required fields are marked *