ದೊಡ್ಡಬಳ್ಳಾಪುರ: ನಗರದ ಕರೇನಹಳ್ಳಿ ವಾರ್ಡ್ 31ರ ರಾಜೇಶ್ವರಿ ಟೆಂಟ್ ಸಮೀಪ ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟದ ಅಂಗಡಿ ತೆರೆಯಲು ಮುಂದಾಗಿರುವ ಮಾಲೀಕರ ವಿರುದ್ದ ಸ್ಥಳೀಯ ನಿವಾಸಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ್ದ ಸ್ಥಳೀಯ ನಗರಸಭೆ ಸದಸ್ಯೆ ಆರ್.ಪ್ರಭಾನಾಗರಾಜ್, ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಸಿದ್ದೇಗೌಡ, ಉಪಾಧ್ಯಕ್ಷ ದ್ರುವಕುಮಾರ್, ಸದಸ್ಯರಾದ ನವೀನ್ಕುಮಾರ್, ಅಫ್ಸಾನ್ನಯಾಜ್, ಸೀನಪ್ಪ, ಜಿಲ್ಲಾಧಿಕಾರಿಗಳಿಂದ ಮೊದಲುಗೊಂಡು ಎಲ್ಲರಿಗೂ ಮನವಿ ಸಲ್ಲಿಸುವ ಮೂಲಕ ಜನವಸತಿ ಪ್ರದೇಶದಲ್ಲಿ ಮದ್ಯಮಾರಾಟಕ್ಕೆ ಅನುಮತಿ ನೀಡದಂತೆ ಕೋರಲಾಗಿದೆ. ಅಲ್ಲಿದೆ ಹಲವಾರು ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುವ ಮುಖ್ಯರಸ್ತೆಯು ಸಹ ಇದೇ ಆಗಿರುವುದರಿಂದ ಶಾಲಾ ಮಕ್ಕಳ ಮೇಲೆ ಕೆಟ್ಟಪರಿಣಾಮ ಬೀರಲಿದೆ. ಈಗ ಬಾರ್ ತೆರೆಯುತ್ತಿರುವ ಸಮೀಪದಲ್ಲೇ ದೇವಾಲಯ ಸಹ ಇರುವುದರಿಂದ ನಾಗರೀಕರಿಗು ತೊಂದರೆಯಾಗಲಿದೆ. ಹಾಗಾಗಿ ಈ ಪ್ರದೇಶದಲ್ಲಿ ಬಾರ್ ತೆರೆಯಬಾರದು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಪ್ರಭಾನಾಗರಾಜ್, ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಸಿದ್ದೇಗೌಡ, ಉಪಾಧ್ಯಕ್ಷ ದ್ರುವಕುಮಾರ್, ಸದಸ್ಯರಾದ ನವೀನ್ ಕುಮಾರ್, ಅಫ್ಸಾನ್ ನಯಾಜ್, ಸೀನಪ್ ಭಾಗವಹಿಸಿದ್ದರು.