ತಿರುಪತಿಯಲ್ಲಿ ಮತ್ತೆ ನಂದಿನಿಯ ಘಮಲು ಹರಡುತ್ತಿದೆ. ತಿರುಪತಿ ದೇವಾಲಯಕ್ಕೆ ತುಪ್ಪ ಸರಬರಾಜು ಮಾಡುತ್ತಿದ್ದ ಕೆಎಂಎಫ್ ಕೆಲಕಾಲ ಕಾರಣಾಂತರಗಳಿಂದ ಸ್ಥಗಿತಗೊಳಿಸಿತ್ತು, ಈಗ ಮತ್ತೊಮ್ಮೆ ತಿರುಪತಿ ದೇವಾಲಯಕ್ಕೆ ನಂದಿನಿ ತುಪ್ಪ ಸರಬರಾಜು ಆರಂಭವಾಗಿದೆ.
ತಿರುಪತಿಗೆ ಹೊರಟಿದ್ದ ನಂದಿನಿ ತುಪ್ಪದ ಲಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು.
ವರ್ಷದ ನಂತರ ಮತ್ತೆ ನಾಡಿನ ಹೆಮ್ಮೆಯ ಕೆಎಂಎಫ್ ಸಂಸ್ಥೆ ತಿರುಪತಿ ದೇವಾಲಯದ ಪ್ರಸಾದಕ್ಕೆ ತುಪ್ಪ ಪೂರೈಸುವ ಕಾರ್ಯ ಆರಂಭಿಸಿದೆ. ತುಪ್ಪ ತುಂಬಿಕೊಂಡು ತಿರುಪತಿಯತ್ತ ಹೊರಟ ಟ್ಯಾಂಕರ್ ಗೆ ಹಸಿರು ನಿಶಾನೆ ತೋರಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.