ಸುಗಟೂರಿನ ಗ್ರಾಮಸ್ಥರಿಂದ ಗೋ.ನಾ ಸ್ವಾಮಿಗೆ ಸನ್ಮಾನ

ಕೋಲಾರ: ತಾಲೂಕಿನ ಸುಗಟೂರು ಗ್ರಾಮದ ಜಾನಪದ ಕಲಾವಿದ ಗೋ.ನಾ ಸ್ವಾಮಿ ಅವರು ಅಮೇರಿಕಾ ದೇಶದಲ್ಲಿ ಆ.30.31 ಹಾಗೂ ಸೆ.1 ರಂದು ಮೂರು ದಿನಗಳ ಕಾಲ ನಡೆಯಲಿರುವ 12 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಸುಗಟೂರು ಗ್ರಾಮಸ್ಥರು ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಗೋ.ನಾ ಸ್ವಾಮಿ ಜಿಲ್ಲೆಯ ಪ್ರತಿನಿಧಿಯಾಗಿ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಲು ಜಿಲ್ಲೆಯ ಜನರು ನೀಡಿರುವ ಪ್ರೀತಿ ಪೋತ್ಸಾಹವೇ ಕಾರಣವಾಗಿದೆ ಇಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ನನಗೆ ಸಿಕ್ಕಿರುವುದು ಹೆಮ್ಮೆ ಎನಿಸಿದೆ ನಿಮ್ಮಗಳ ಆಶೀರ್ವಾದದಿಂದ ಜಿಲ್ಲೆಯ ಹೆಸರನ್ನು ಉಳಿಸುವ ಅವಕಾಶ ಸಿಕ್ಕಿಗೆ ಗ್ರಾಮೀಣ ಜಾನಪದ ಪ್ರತಿಭೆಯನ್ನು ಗುರುತಿಸಿ ವಿಶ್ವದ ಮಟ್ಟದಲ್ಲಿ ನಡೆಯುವ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸುಗಟೂರು ಗ್ರಾಮದ ಮುಖಂಡರಾದ ತಿರುಮಳಪ್ಪ, ಗೋಪಾಲಗೌಡ, ಚಲಪತಿಗೌಡ, ಚಂದ್ರಪ್ಪ, ಅಶ್ವಥ್, ವೆಂಕಟಸ್ವಾಮಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!