ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಹುಂಡಿ ಕಾಣಿಕೆ ಎಣಿಕೆ ನಡೆದ್ದು, ಒಟ್ಟು ಒಟ್ಟು 59,34,739 ರೂ. ಸಂಗ್ರಹವಾಗಿದೆ.
90,000 ರೂ. ಮೌಲ್ಯದ 1 ಕೆಜಿ 800 ಗ್ರಾಂ ಬೆಳ್ಳಿ, 5,760 ರೂ. ಮೌಲ್ಯದ 1 ಗ್ರಾಂ 600 ಎಂಎಲ್ ಚಿನ್ನವನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಗೆ ಹಾಕಿದ್ದಾರೆ.
ನಿಯಮಾನುಸಾರ ಹುಂಡಿ ತೆಗೆದು ಎಣಿಕೆ ನಡೆದಿದ್ದು, ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಶೀಲ್ದಾರ್ ಜಿ.ಜೆ ಹೇಮಾವತಿ, ಪ್ರಧಾನ ಅರ್ಚಕ ಆರ್.ಸುಬ್ರಹ್ಮಣ್ಯ, ದೇವಾಲಯದ ಸಿಬ್ಬಂದಿ ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಲಾಯಿತು.