ರೇಣುಕಾ ಸ್ವಾಮಿ ಕೊಲೆ ಪ್ರಕರಣ: ಆರೋಪಿ ನಟ ದರ್ಶನ್ ಜೈಲಿನಲ್ಲಿ ಸಿಗರೇಟ್‌ ಸೇದುತ್ತಿರುವ ಫೋಟೋ ವೈರಲ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಆರೋಪಿ ನಟ ದರ್ಶನ್ 65 ದಿನಗಳಿಂದ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ.‌ ಆರೋಪಿ‌ ದರ್ಶನ್ ಜೈಲಿನಲ್ಲಿ ಸಿಗರೇಟ್‌ ಸೇದುತ್ತಿರುವ ಫೋಟೋವೊಂದು ಸದ್ಯ ವೈರಲ್ ಆಗುತ್ತಿದೆ.

ಜೈಲಿನಲ್ಲಿ ವಿಲ್ಸನ್‌ ಗಾರ್ಡ್‌ ನಾಗನ ಜೊತೆ ಆರೋಪಿ ದರ್ಶನ್ ಕುಳಿತು ಸಿಗರೇಟ್‌ ಸೇದುತ್ತಿರುವ ಫೋಟೋ‌ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಪ್ಲಾಸ್ಟಿಕ್‌ ಚೇರ್ ನಲ್ಲಿ ಕುಳಿತುಕೊಂಡಿರುವ ದರ್ಶನ್‌, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್‌ ಹಿಡಿದುಕೊಂಡಿರುವುದು ಕಂಡುಬಂದಿದೆ. ಆತನ ಜೊತೆಗೆ ಮತ್ತೊಬ್ಬ ಕೈದಿಯಾಗಿರುವ ಮ್ಯಾನೇಜರ್‌ ನಾಗರಾಜ್‌ ಕೂಡ ಇದ್ದಾನೆ. ದರ್ಶನ್‌ ಕೂದಲು ತೆಗೆದಿರುವುದು ಫೋಟೋದಲ್ಲಿ ಕಂಡುಬಂದಿದೆ. ಮತ್ತೋರ್ವ ಕುಳ್ಳ ಸೀನ ಎಂದು ತಿಳಿದುಬಂದಿದೆ.

ಜೈಲಿನಲ್ಲಿ ನಿಯಮಗಳನ್ನು ಮೀರಿ ಖೈದಿಗಳಿಗೆ ಮದ್ಯ ಸಿಗರೇಟ್ ಸಪ್ಲೈ ಮಾಡಲಾಗುತ್ತಿದೆ ಎಂದು ಹಲವು ಬಾರಿ  ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಈ ಫೋಟೋ ಸಾಕ್ಷ್ಯ ಹೇಳುತ್ತಿದೆ.

Leave a Reply

Your email address will not be published. Required fields are marked *

error: Content is protected !!