ನಗರದ ರಾಘವೇಂದ್ರಸ್ವಾಮಿಯ 353ನೇ ವರ್ಷದ ಆರಾಧನ ಮಹೋತ್ಸವ

ಕೋಲಾರ: ನಗರದ ಮಧ್ಯಭಾಗದಲ್ಲಿರುವ ಶ್ರೀ ರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ವಿವಿಧ ಪೂಜಾ ಕಾರ್ಯಗಳು ಬಹಳ ವಿಜೃಂಭಣೆಯಿಂದ ನಡೆಯಿತು.

ಮೊದಲ ದಿನ ಮಂಗಳವಾರ ಬೆಳಿಗ್ಗೆ ಪಂಚಾಮೃತ ಅಭಿಷೇಕದ ಮೂಲಕ ಸ್ವಾಮೀಗಳ ಆರಾಧನಾ ಮಹೋತ್ಸವ ಪ್ರಾರಂಭವಾಗಿ ಭಕ್ತರಿಗೆ ತೀರ್ಥ ಪ್ರಸಾದ ಮದ್ಯಾಹ್ನ ಸಾವಿರಾರು ಮಂದಿಗೆ ಊಟದ ವ್ಯವಸ್ಥೆಯನ್ನು ಮಠದ ವತಿಯಿಂದ ಮಾಡಿಸಲಾಯಿತು ಬುಧವಾರ ಮಧ್ಯರಾದನೆ ದಿನವಾಗಿ ನಗರದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ಸಹ ಹಮ್ಮಿಕೊಳ್ಳಲಾಗಿತ್ತು ಗುರುವಾರ ವಿಶೇಷ ಪೂಜೆಯೊಂದಿಗೆ ಆರಾಧನಾ ಮಹೋತ್ಸವವು ಮುಕ್ತಾಯವಾಯಿತು ನಗರದ ಹಲವು ಭಕ್ತ ಮಹಾಷಯರು, ರಾಯರಿಗೆ ತಮ್ಮ ತನು ಮನ ಧನ ಸೇವೆಯನ್ನು ಅರ್ಪಿಸಿ, ರಾಯರ ಆರಾಧನೆಯನ್ನು ಅದ್ದೂರಿಯಾಗಿ ನಡೆಸಲು ನೆರವಾದರು.

Leave a Reply

Your email address will not be published. Required fields are marked *