
ಸುಮಾರು 40 ಸಾವಿರ ರೂ. ಮೌಲ್ಯದ 13 ಕೆಜಿ 200 ಗ್ರಾಂ ತೂಕದ ಕನಕಾಂಬರ ಹೂ ಕಳ್ಳತನ ನಡೆದಿರುವ ಘಟನೆ ನಗರದ ಡಿಕ್ರಾಸ್ ಬಳಿ ನಡೆದಿದೆ.
ರತ್ನಾಕರ ಎಂಬ ಹೂ ಮಾರಾಟಗಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂ ಮಾರಾಟ ಮಾಡಲು ಕೋಟಾಲದಿನ್ನೆ, ಗೌರಿಬಿದನೂರು ಸೇರಿದಂತೆ ವಿವಿಧೆಡೆ ಕನಕಾಂಬರ ಹೂ ಖರೀದಿಸಿ ಡಿಕ್ರಾಸ್ ಗೆ ತಂದಿದ್ದರು. ಆದರೆ, ಈಗ ಹೂ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ.

ಡಿಕ್ರಾಸ್ ಬಳಿ ಹೂ ಕಾರಿನಿಂದ ಹೂ ಚೀಲಗಳನ್ನು ಇಳಿಸಿದ್ದರು. ಹೂ ಚೀಲ ಇಳಿಸಿ ಅವುಗಳನ್ನು ಅಲ್ಲೇ ಬಿಟ್ಟು ತುರ್ತು ಕೆಲಸದ ನಿಮಿತ್ತ ಬೇರೆಡೆ ಹೋಗಿ ಬರುವಷ್ಟರಲ್ಲಿ ಹೂ ಚೀಲಗಳನ್ನು ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಒಂದು ಕೆಜಿ ಬಿಡಿ ಕನಕಾಂಬರ ಹೂಗೆ 3ಸಾವಿರ ರೂ. ನಂತೆ ಖರೀದಿಸಿ ತಂದಿದ್ದರು. ಇದೀಗ ಹೂ ಮಾರಾಟಗಾರ ಹೂ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.