ನಿಜಾಮಾಬಾದ್ ಮಹಾನಗರ ಪಾಲಿಕೆಯ ಅಧೀಕ್ಷಕ ಮತ್ತು ಪ್ರಭಾರಿ ಕಂದಾಯ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ದಾಳಿ ವೇಳೆ ಕೋಟಿಗಟ್ಟಲೆ ನಗದು ಪತ್ತೆ

ನಿಜಾಮಾಬಾದ್ ಮುನ್ಸಿಪಲ್ ಸೂಪರಿಂಟೆಂಡೆಂಟ್ ಮನೆ ಮೇಲೆ ಎಸಿಬಿ ದಾಳಿ ಮಾಡಲಾಗಿದೆ. ಈ ವೇಳೆ ಕೋಟಿಗಟ್ಟಲೆ ನಗದು ಪತ್ತೆಯಾಗಿದ್ದು, ಅದನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಿಜಾಮಾಬಾದ್ ಮಹಾನಗರ ಪಾಲಿಕೆಯ ಅಧೀಕ್ಷಕ ಮತ್ತು ಪ್ರಭಾರಿ ಕಂದಾಯ ಅಧಿಕಾರಿ ದಾಸರಿ ನರೇಂದರ್ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ನಗದು ಮತ್ತು ಆಸ್ತಿ ಪತ್ತೆಯಾಗಿದೆ. ನರೇಂದರ್ ವಿರುದ್ಧ ಅಕ್ರಮ ಆಸ್ತಿಗಾಗಿ ದಾಖಲಾದ ಪ್ರಕರಣದ ಭಾಗವಾಗಿ ನಡೆಸಿದ ದಾಳಿಯಲ್ಲಿ ಅವರ ಆದಾಯದ ಮೂಲಗಳನ್ನು ಮೀರಿದ ಆಸ್ತಿಯನ್ನು ಬಹಿರಂಗಪಡಿಸಲಾಗಿದೆ.

ಎಸಿಬಿ ಶೋಧದ ವೇಳೆ ಅಧಿಕಾರಿ ಮನೆಯಲ್ಲಿ 2.93 ಕೋಟಿ ನಗದು, ಅವರ ಪತ್ನಿ ಮತ್ತು ತಾಯಿ ಹೊಂದಿರುವ ಖಾತೆಗಳಲ್ಲಿ 1.10 ಕೋಟಿ ರೂ. 51 ತೊಲ ಚಿನ್ನ. 17 ಸ್ಥಿರಾಸ್ತಿಗಳು ಸೇರಿ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ.  6.07 ಕೋಟಿ ಆಗಿದೆ.

ದಾಳಿಯ ನಂತರ, ನರೇಂದರ್ ಅವರನ್ನು ಬಂಧಿಸಲಾಗಿದ್ದು, ಹೈದರಾಬಾದ್‌ನಲ್ಲಿರುವ ಎಸ್‌ಪಿಇ ಮತ್ತು ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ.

ಎಸಿಬಿ ಪ್ರಕರಣದ ತನಿಖೆಯನ್ನು ಮುಂದುವರೆಸಿದೆ, ಹೆಚ್ಚುವರಿ ಆಸ್ತಿಯನ್ನು ಪತ್ತೆಹಚ್ಚಲು ಹೆಚ್ಚಿನ ಶೋಧ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!