ಪ್ರೀತಿ-ಪ್ರೇಮಕ್ಕೆ ಕಣ್ಣಿಲ್ಲ, ಯಾರಿಗೆ ಯಾರು ಮೇಲಾದರೂ ಯಾವಾಗಾದರೂ ಲವ್ ಆಗಬಹುದು, ಆಗಿದೆ ಕೂಡ. ಕಾಲೇಜ್ ಲೈಫ್ ನಲ್ಲಿ ಪ್ರೀತಿ, ಪ್ರೇಮ ಅನ್ನೋದು ಸಾಮಾನ್ಯ. ಸಾಮಾನ್ಯವಾಗಿ ಶಾಲಾ-ಕಾಲೇಜು ದಿನಗಳಲ್ಲಿ ಒಬ್ಬ ಹುಡುಗಿ ಹಿಂದೆ ಮೂರ್ನಾಲ್ಕು ಹುಡುಗರು ಸುತ್ತಾಡೋದು ಕಾಮನ್. ಕೆಲವೊಮ್ಮೆ ಇದೇ ವಿಷಯವಾಗಿ ಹುಡುಗರ ಮಧ್ಯೆ ಗಲಾಟೆ ಸಹ ಆಗತ್ತಿರುತ್ತದೆ. ಇಂತಹ ಲವ್‌ಸ್ಟೋರಿಗಳು ಸಾವಿನಲ್ಲಿಯೂ ಅಂತ್ಯವಾಗಿರುವ ನಿದರ್ಶನಗಳು ಇವೆ. ಆದ್ರೆ ನೊಯ್ಡಾದಲ್ಲಿ ಓರ್ವ ಹುಡುಗನಿಗಾಗಿ ಇಬ್ಬರು ಹುಡುಗಿಯರು ಜುಟ್ಟು ಹಿಡಿದುಕೊಂಡು ಕ್ಲಾಸ್ ರೂಮ್ ನಲ್ಲೇ ಕಿತ್ತಾಡಿರುವ ಘಟನೆ ನಡೆದಿದೆ. ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ನೊಯ್ಡಾದ ಎನ್‌ಐಇಟಿ ಕಾಲೇಜಿನಲ್ಲಿ ನಡೆದಿದೆ. ಒಂದೇ ಕಾಲೇಜಿನ ಒಂದೇ ತರಗತಿಯ ಇಬ್ಬರು ಯುವತಿಯರು ಓರ್ವ ವಿದ್ಯಾರ್ಥಿಯನ್ನು ಪ್ರೀತಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಒಬ್ಬ ಯುವತಿ ತನ್ನ ಎಲ್ಲಾ ತಂಡದ ಜೊತೆ ಗೆಳಯನ ಮತ್ತೋರ್ವ ಗೆಳತಿಯ ಮೇಲೆ ಹಲ್ಲೆ ನಡೆಸಲು ಬಂದಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಕ್ಲಾಸ್‌ರೂಮ್‌ನಲ್ಲಿಯೇ ವಿದ್ಯಾರ್ಥಿಗಳು ಪರಸ್ಪರ ಹೊಡೆದುಕೊಂಡಿದ್ದಾರೆ.