
ತಾಲೂಕಿನ ವಡ್ಡರಹಳ್ಳಿ ರೈಲ್ವೆ ನಿಲ್ದಾಣ ಸಮೀಪವಿರುವ ತಿರುಮಗೊಂಡನಹಳ್ಳಿ ಬಳಿಯ ರೈಲ್ವೆ ಗೇಟ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ನಾಳೆ(ಆ.3ರ ಬೆಳಗ್ಗೆ 10ಗಂಟೆಯಿಂದ ಆ.4ರ ಬೆಳಗ್ಗೆ 5 ಗಂಟೆಯವರೆಗೆ) ರಸ್ತೆ ಬಂದ್ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಈ ರಸ್ತೆ ಎಸ್.ಎಸ್ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ತೂಬಗೆರೆ, ಹಾಡೋನಹಳ್ಳಿ ಸೇರಿದಂತೆ ಇತರೆ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಭಾಗದ ಜನರು ಗೊಲ್ಲಹಳ್ಳಿ-ಪೆರಮಗೊಂಡನಹಳ್ಳಿ-ಹಾಡೋನಹಳ್ಳಿ ರಸ್ತೆ ಬಳಸಿಕೊಂಡು ಹೋಗಬೇಕಾಗಿ ಇಲಾಖೆ ಮನವಿ ಮಾಡಿದೆ.