ಕೋಲಾರ: ಆಂಧ್ರಪ್ರದೇಶದ ತಿರುಮಲ ತಿರುಪತಿ ಬೆಟ್ಟದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪ್ರತಿ ನಿತ್ಯ ನಡೆಯುವ ಅನ್ನದಾಸೋಹಕ್ಕೆ ಮಂಗಳವಾರ ನಗರದಿಂದ ಒಂದು ಲಾರಿ ಲೋಡ್ ತರಕಾರಿಗಳನ್ನು ಶಾಸಕ ಕೊತ್ತೂರು ಜಿ ಮಂಜುನಾಥ್ ಅವರು ಖರೀದಿಸಿ ಕಳಸಿಕೊಟ್ಟರು.
ಕೋಲಾರ ಜಿಲ್ಲೆ ಸೇರಿದಂತೆ ಇತರೆ ಭಾಗಗಳಿಂದ ತರಕಾರಿಗಳನ್ನು ಅನ್ನದಾಸೋಹಕ್ಕೆ ತರಲು ಉಪಯೋಗವಾಗಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವರು, ಸುಮಾರು 40 ಲಕ್ಷ ವೆಚ್ಚದಲ್ಲಿ ಸ್ವಂತ ಹಣದಿಂದ ವಾಹನವನ್ನು ಖರೀದಿಸಿ ತಿರುಮಲ ಆಡಳಿತ ಮಂಡಳಿಗೆ ದಾನಿಗಳಿಂದ ಕೊಡುವ ತರಕಾರಿ ಅವಶ್ಯಕತೆಗೆ ತಕ್ಕಷ್ಟು ಸಿಗದೆ ಇದ್ದಾಗ ಶಾಸಕರೇ ನೇರವಾಗಿ ವ್ಯಾಪಾರಸ್ಥರು ಹಾಗೂ ರೈತರಿಂದ ಖರೀದಿಸಿ ಕಳಸಿಕೊಡುವ ವ್ಯವಸ್ಥೆಯನ್ನು ಸುಮಾರು 15 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.
ಈ ಸಂದರ್ಭದಲ್ಲಿ ಕೊತ್ತೂರು ಮಂಜುನಾಥ್ ಅವರ ಅಭಿಮಾನಿ ಬಳಗದವರಾದ ಚಂಜಿಮಲೆ ರಮೇಶ್, ಮಲೇಷಿಯಾ ರಾಜಕುಮಾರ್, ಸೀಸಂದ್ರ ಗೋಪಾಲಗೌಡ, ವೈ ಶಿವಕುಮಾರ್, ಮೈಲಾಂಡಹಳ್ಳಿ ಮುರಳಿ, ಮಹೇಶ್, ಲೋಕೇಶ್, ಖಾದ್ರಿಪುರ ಬಾಬು, ಬಿ.ಟಿ ಚಂದ್ರಶೇಖರ್, ಯಲವಾರ ನವೀನ್ ಕುಮಾರ್ ಮುಂತಾದವರು ಇದ್ದರು.