
ಯುವಕನೊಬ್ಬ ರೈಲಿನಲ್ಲಿ ಅಪಾಯಕಾರಿ ಸಾಹಸ ಮಾಡಿ ತನ್ನ ಕಾಲು ಮತ್ತು ಕೈಯನ್ನು ಕಳೆದುಕೊಂಡಿದ್ದಾನೆ.
ಮುಂಬೈನಲ್ಲಿ ಕಳೆದ ತಿಂಗಳು, ಫರ್ಹತ್ ಅಜಮ್ ಶೇಖ್ ಎಂಬ ಯುವಕ ಚಲಿಸುತ್ತಿರುವ ರೈಲನ್ನು ಹಿಡಿದು ಜಾರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಗಮನಕ್ಕೆ ಬಂದಿದೆ.

ಆದರೆ, ಆ ವೀಡಿಯೋ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ರೈಲು ಹಿಡಿದು ಸ್ಟಂಟ್ ಮಾಡುವ ವೇಳೆ ಆ ಯುವಕನಿಗೆ ಅಪಘಾತವಾಗಿದೆ. ಸ್ಟಂಟ್ ವೇಳೆ ಆಜಂ ಶೇಖ್ ತನ್ನ ಕಾಲು ಮತ್ತು ಕೈಯನ್ನು ಕಳೆದುಕೊಂಡಿದ್ದಾನೆ. ಆದ್ದರಿಂದ ಯಾರೂ ಸಹ ಅಂತಹ ಅಪಾಯಕಾರಿ ಸಾಹಸಗಳನ್ನು ಮಾಡುವ ಮೊದಲು ಎಚ್ಚರ ವಹಿಸಿ.