ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಡಿಯಲ್ಲಿ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ನಮ್ಮ ಆರ್.ಎಲ್ ಜಾಲಪ್ಪ ಸಮೂಹ ಸಂಸ್ಥೆಗಳ ತಾಂತ್ರಿಕ ಕಾಲೇಜು ಒಂದು. ನಮ್ಮ ಕಾಲೇಜಿನ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಮೂಲ ಪವನ್ ಕುಮಾರ್ ರೆಡ್ಡಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಉತ್ತಮ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿರುವುದು ಬಹಳ ಹೆಮ್ಮೆಯ ವಿಷಯ ಎಂದು ಕಾಲೇಜು ನಿರ್ದೇಶಕ ರಾಜೇಂದ್ರ ಹೇಳಿದರು.
ವಿದ್ಯಾರ್ಥಿ ಮೂಲ ಪವನ್ ಕುಮಾರ್ ರೆಡ್ಡಿ ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಉನ್ನತ ಸಾಧನೆಗೈದ ವಿದ್ಯಾರ್ಥಿ ಮೂಲ ಪವನ್ ಕುಮಾರ್ ರೆಡ್ಡಿಯನ್ನ ಕಾಲೇಜು ನಿರ್ದೇಶಕ ರಾಜೇಂದ್ರ, ಪ್ರಾಧ್ಯಪಕರಾದ ಸುನೀಲ್ ಕುಮಾರ್, ದಾದಾಫೀರ್ ಸೇರಿದಂತೆ ಅಭಿನಂದಿಸಿದರು. ನಂತರ ತೆರದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದೆ ನಮ್ಮ ಕಾಲೇಜಿನ ವಿದ್ಯಾರ್ಥಿಗೆ ಐದನೇ ರ್ಯಾಂಕ್ ಬಂದಿತ್ತು. ಮುಂದಿನ ದಿನಗಳಲ್ಲಿ ಮೊದಲ ರ್ಯಾಂಕ್ ಪಡೆಯಲು ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುವುದು ಎಂದರು.
ಕಾಲೇಜಿನಲ್ಲಿ ಉತ್ತಮ ಪರಿಣತಿ ಪಡೆದ ಬೋಧಕರ ಸಿಬ್ಬಂದಿ ಇದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ವಿದ್ಯಾರ್ಥಿಯನ್ನು ಉಳಿದ ಎಲ್ಲಾ ವಿದ್ಯಾರ್ಥಿಗಳು ಮಾದರಿ, ಸ್ಫೂರ್ತಿಯಾಗಿ ತೆಗೆದುಕೊಂಡು ಉತ್ತಮ ಅಂಕ ಪಡೆದು ತಂದೆ-ತಾಯಿ, ಕಾಲೇಜಿಗೆ ಕೀರ್ತಿ ತರಬೇಕು ಎಂದು ಕೋರಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿ ಮೂಲ ಪವನ್ ಕುಮಾರ್ ರೆಡ್ಡಿ, ನನ್ನ ಈ ಎಲ್ಲಾ ಸಾಧನೆಗೆ ನನ್ನ ತಂದೆ-ತಾಯಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಗುರುಗಳು. ರ್ಯಾಂಕ್ ಪಡೆಯುವ ನಿರೀಕ್ಷೆ ಇತ್ತು. ಅದರಂತೆ ನಾಲ್ಕನೇ ರ್ಯಾಂಕ್ ಪಡೆದಿರುವುದಕ್ಕೆ ಖುಷಿ ಇದೆ. ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಇನ್ನೂ ಹೆಚ್ಚು ಪರಿಣತಿ ಪಡೆದು ಉತ್ತಮ ಸಾಧನೆ ಮಾಡಲಾಗುವುದು ಎಂದರು.
ಈ ವೇಳೆ ವಿದ್ಯಾರ್ಥಿ ತಂದೆ ಮೂಲ ಎರಕಲ ರೆಡ್ಡಿ, ತಾಯಿ ಮೂಲ ನಾಗರತ್ನಮ್ಮ, ಪ್ರಾಂಶುಪಾಲ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.