ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ನಟ ದರ್ಶನ್ ಮನೆ ಊಟ, ಹಾಸಿಗೆ, ಬಟ್ಟೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 24ನೇ ಎಸಿಎಂಎಂ ಕೋರ್ಟ್ ಇಂದು ವಜಾ ಮಾಡಿದೆ.
ಪ್ರಸ್ತುತ ನಟ ದರ್ಶನ್ ಅವರಿಗೆ ಜೈಲು ಊಟವೇ ತಿನ್ನಬೇಕಾಗಿದೆ.
ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತಿದೆ ಎಂಬ ಕಾರಣ ನೀಡಿ ಮನೆಯ ಊಟ ತರಿಸಲು ಅನುಮತಿ ಕೋರಿ ದರ್ಶನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು, ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದ್ದಾರೆ.
ಜೈಲೂಟದಿಂದ ದರ್ಶನ್ಗೆ ಯಾವುದೇ ಸಮಸ್ಯೆ ಆಗಿಲ್ಲ. ಶೂಟಿಂಗ್ ವೇಳೆ ಆದ ಗಾಯದ ನೋವಿನ ಬಗ್ಗೆ ಮಾತ್ರ ವೈದ್ಯರು ಸಲಹೆ ನೀಡಿದ್ದಾರೆ. ಜೈಲಿನ ನಿಯಮಾವಳಿಯಲ್ಲಿ ಮನೆಯೂಟಕ್ಕೆ ಅವಕಾಶವಿಲ್ಲ ಎಂದು ಪೊಲೀಸರ ಪರ ವಿಶೇಷ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು.
ದರ್ಶನ್ ಮನೆಯ ಊಟಕ್ಕೆ ಕೋರ್ಟ್ ನಿರಾಕರಣೆಗೆ ಪ್ರಮುಖ ಕಾರಣಗಳು ಏನು ಗೊತ್ತಾ…?
ಕರ್ನಾಟಕ ಪ್ರಿಜನ್ಸ್ ಕರೆಕ್ಷನ್ ಮ್ಯಾನುಯೆಲ್ -2021 ರ 728 ಪ್ರಕಾರ ಕೊಲೆ ಆರೋಪಿಗೆ ಮನೆ ಊಟ ಕೊಡೋ ಅವಕಾಶ ಇಲ್ಲ..
ಅಲ್ಲದೆ ಜೈಲು ನೀಡಿದ ವರದಿಯಲ್ಲಿ ಮನೆ ಊಟ ಅವಶ್ಯಕತೆ ಕಾಣುತ್ತಿಲ್ಲ ಅಂತ ವರದಿ..
ಮನೆ ಊಟ ಬೇಕು ಅನ್ನೋ ಹಾಗೆ ಯಾವುದೇ ವೈದ್ಯಕೀಯ ರಿಪೋರ್ಟ್ ಇಲ್ಲ…
ಹೀಗಾಗಿ ಕೋರ್ಟ್ ಅರ್ಜಿ ವಜಾ ಮಾಡಿದೆ.