ಕೋಲಾರ: ವಿಧ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗಿರುವ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ವಿತರಣೆಯಲ್ಲಿನ ಸರಕಾರದ ನಿರ್ಲಕ್ಷ್ಯದ ವಿರುದ್ಧ ಎಸ್‌ಎಫ್‌ಐ ಸಂಘಟನೆಯಿಂದ ತಹಶಿಲ್ದಾರ್ ಹರ್ಷವರ್ಧನ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ನೀಡಿದರು
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಅಧ್ಯಕ್ಷ ಅಂಬ್ಲಿಕಲ್ ಎನ್ ಶಿವಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ವಿತರಣೆಯ ನಿರ್ಲಕ್ಷ್ಯದಿಂದ ರಾಜ್ಯಾದ್ಯಂತ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಇದಕ್ಕೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡದಿರುವುದು ಖಂಡನೀಯವಾದದ್ದು ಸರ್ಕಾರಕ್ಕೆ ಕಡಿತ ಮಾಡಿರುವ ವಿದ್ಯಾರ್ಥಿ ವೇತನ ಹಾಗೂ ಫೆಲೋಷಿಪ್ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸರಕಾರ ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತೂ ಗಮನವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನ ಹಾಗೂ ಫೆಲೋಷಿಪ್ ಇಲ್ಲಿಯವರೆಗೂ ದೊರೆಯದ ಕಾರಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಪರದಾಡುವಂತಾಗಿದೆ ಪ್ರತೀ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ 60 ರಿಂದ 70 % ಅಂಕ ಗಳಿಸಿದ ಎಸ್ಸಿ ಮತ್ತು ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ಏಳು ಸಾವಿರ ವಿದ್ಯಾರ್ಥಿವೇತನವನ್ನು ಪಡೆಯುತ್ತಿದ್ದರು. ಆದರೆ ಈ ವರ್ಷ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನವನ್ನು ಕೈ ಬಿಡಲಾಗಿದೆ ಇದಲ್ಲದೆ, 75% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ, 6 ಲಕ್ಷ ಆದಾಯದ ಮಿತಿಯನ್ನು ವಿಧಿಸಲಾಗಿದೆ, ಆದರೆ ಈ ಹಿಂದೆ ಅಂತಹ ಯಾವುದೇ ನಿರ್ಬಂಧಗಳಿಲ್ಲ ಪ್ರಭುತ್ವ ಯೋಜನೆಯಡಿ ವಿಶ್ವದ ಅಗ್ರ 250 ವಿವಿ ಗಳಲ್ಲಿ ಪಿ ಎಚ್.ಡಿ ಮಾಡುವುದಕ್ಕೆ ಅವಕಾಶ ಇತ್ತು ಈಗ ಅಗ್ರ 100 ವಿವಿ ಎಂದು ಸಚಿವರು ಹೇಳಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿ ಎಂದರು.
ರಾಜ್ಯದ ಎಲ್ಲಾ ಒಬಿಸಿ, ಅಲ್ಪಸಂಖ್ಯಾತ ಸಮುದಾಯದ ಪಿಎಚ್.ಡಿ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದ ಮಾಸಿಕ ಫೆಲೋಶಿಪ್ ಹಣದ ಮೊತ್ತದಲ್ಲಿಯೂ ಕಡಿತ ಮಾಡಲಾಗಿದೆ ಹಿಂದಿನ ಬಿಜೆಪಿ ಸರ್ಕಾರವು ಕೋವಿಡ್ ನೆಪ ಹೇಳಿ ಈ ಫೆಲೋಶಿಪ್ ಅನ್ನು ತಿಂಗಳಿಗೆ 25 ಸಾವಿರದಿಂದ ರಿಂದ 10 ಸಾವಿರಕ್ಕೆ ಇಳಿಸಿತು. ನಂತರ ಬಂದ ಕಾಂಗ್ರೆಸ್ ಸರಕಾರ ಈ ಸಮಸ್ಯೆಯನ್ನು ಇಲ್ಲಿಯವರೆಗೂ ಬಗೆಹರಿಸದಿರುವುದು ಅತ್ಯಂತ ಖಂಡನೀಯ. ಅಲ್ಪಸಂಖ್ಯಾತರ ಪಿಎಚ್‌ಡಿಗಾಗಿ ಮಾಸಿಕ 25 ಸಾವಿರ ಫೆಲೋಶಿಪ್ ಅನ್ನು ನೀಡಲು ಆದೇಶಿಸಬೇಕು ಇಲ್ಲದೇ ಹೋದರೆ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು
ಮನವಿ ನೀಡುವ ಸಂದರ್ಭದಲ್ಲಿ ಎಸ್‌ಎಫ್‌ಐ ಮುಳಬಾಗಿಲು ತಾ ಅಧ್ಯಕ್ಷ ಶಶಿಕುಮಾರ್, ಮುಖಂಡರಾದ ಲಕ್ಷ್ಮಣ್, ಆಕಾಶ್, ಮುನಿರಾಜು, ಮಹೇಶ್, ಪ್ರವೀಣ್, ಹರೀಶ್, ಮನೋಜ್, ಲಕ್ಷ್ಮಣ್, ಮುಂತಾದವರು ಇದ್ದರು.