ನಗರಸಭೆಯ ಒಳಚರಂಡಿ ಸಂಸ್ಕರಣಾ ಘಟಕ(STP) ಬಗ್ಗೆ ಶಾಸಕ ಧೀರಜ್ ಮುನಿರಾಜ್ ವಿಧಾನಸಭೆಯಲ್ಲಿ ಚರ್ಚೆ

ದೊಡ್ಡಬಳ್ಳಾಪುರ ತಾಲೂಕಿನ ಪ್ರಮುಖ ವಿಚಾರವಾದ ನಗರಸಭೆಯ ಒಳಚರಂಡಿ ಸಂಸ್ಕರಣಾ ಘಟಕ(STP) ಬಗ್ಗೆ ಶಾಸಕರಾದ ಧೀರಜ್ ಮುನಿರಾಜು ವಿಧಾನಸಭೆಯಲ್ಲಿ ಮಾತನಾಡಿದರು.

ಚಿಕ್ಕತುಮಕೂರು ಕೆರೆಯ 37 ಎಕರೆ ವಿಸ್ತೀರ್ಣದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ(STP) ಇದ್ದು, ಸದ್ಯ ದೊಡ್ಡಬಳ್ಳಾಪುರ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಮಾಡುತ್ತಿರುವ ಒಳಚರಂಡಿ ಸಂಸ್ಕರಣಾ ಘಟಕ(STP)ದಲ್ಲಿ ಯಾವುದೇ ರೀತಿಯ ಶುದ್ಧೀಕರಣ ಕೆಲಸ ಆಗುತ್ತಿಲ್ಲ, ಕೆರೆಯ ಒಡಲಿಗೆ ನೇರವಾಗಿ ತ್ಯಾಜ್ಯ ಸೇರಿದ ಪರಿಣಾಮ ಎರಡು ಗ್ರಾಮ ಪಂಚಾಯಿತಿಗಳ 17 ಗ್ರಾಮಗಳಲ್ಲಿನ ಅಂತರ್ಜಲ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ, ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವಿಧಾನಸಭೆ ಮತ್ತು ಲೋಕಸಬಾ ಚುನಾವಣೆಯನ್ನ ಬಹಿಷ್ಕರಿಸಿದ್ದರು, ಅಧಿಕಾರಿಗಳು ಮನವೊಲೈಕೆಯ ನಂತರ ಮತದಾನ ಬಹಿಷ್ಕಾರದಿಂದ ಹಿಂದೆ ಸರಿದಿದ್ದರು.

ಎರಡು ಗ್ರಾಮ ಪಂಚಾಯಿತಿಯ ಜನರು ಮೂರನೇ ಹಂತದ ನೀರು ಶುದ್ಧೀಕರಣ ಘಟಕಕ್ಕೆ ಬೇಡಿಕೆಯನ್ನ ಇಟ್ಟಿದ್ದರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎರಡನೇ ಹಂತದ ನೀರು ಶುದ್ಧೀಕರಣ ಘಟಕ ಸ್ಥಾಪಿಸುವ ಭರವಸೆಯನ್ನ ನೀಡಿದ್ದರು, ಅದರಂತೆ 130.50 ಕೋಟಿಯ ಕ್ರಿಯಾಯೋಜನೆ ತಯಾರಾಗಿದೆ. ಸದ್ಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಚಿಕ್ಕತುಮಕೂರು ಕೆರೆಯಲ್ಲಿರುವ ಒಳಚರಂಡಿ ಸಂಸ್ಕರಣಾ ಘಟಕ(STP) ಬಂದ್ ಮಾಡುವಂತೆ ಸೂಚನೆ ನೀಡಿದೆ, ನಾವು ಸಹ ಒಳಚರಂಡಿ ಸಂಸ್ಕರಣಾ ಘಟಕ(STP) ಬದಲಾಯಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡುವ ಒಳಚರಂಡಿ ಸಂಸ್ಕರಣಾ ಘಟಕ(STP) ಬದಲಾಯಿಸಲು ಮತ್ತು 130.50 ಕೋಟಿ ಲಕ್ಷದ ಮೂರನೇ ಹಂತದ ಶುದ್ಧೀಕರಣ ಘಟಕ ಟೆಂಡರ್ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಧೀರಜ್ ಮುನಿರಾಜ್ ಅವರು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರಿಗೆ ಪ್ರಶ್ನೆ ಮಾಡಿದರು.

ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ರವರು 130.50 ಕೋಟಿ ಕ್ರಿಯಾಯೋಜನೆ ಟೆಂಡರ್ ನಮ್ಮ ಮುಂದೆ ಬದಿಲ್ಲ, ಆ ಬಗ್ಗೆ ಅಧಿಕಾರಿಗಳ ಬಗ್ಗೆ ಚರ್ಚಿಸಲಾಗವುದು, ಇದು ದೊಡ್ಡಮೊತ್ತದ ಯೋಜನೆಯಾಗಿದ್ದು, ಹಣಕಾಸಿನ ಲಭ್ಯತೆ ನೋಡಿ ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

Leave a Reply

Your email address will not be published. Required fields are marked *