ಕಾಡನೂರಿನ‌ ಮಹೇಶ್ವರಮ್ಮ ದೇವಾಲಯದಲ್ಲಿ‌ ಪವಾಡ…!: ಕಣ್ಣುತೆರೆದ ಮಹೇಶ್ವರಮ್ಮ ವಿಗ್ರಹ ಮೂರ್ತಿ…!: ಭಕ್ತರಲ್ಲಿ ದಿಗ್ಭ್ರಮೆ…!: ಪವಾಡ ಕಣ್ತುಂಬಿಕೊಳ್ಳಲು ಹರಿದು ಬಂದ ಭಕ್ತಸಾಗರ

ನಿನ್ನೆ ಗುರು ಪೂರ್ಣಿಮೆ ನಾಡಿನಾದ್ಯಂತ ಮನೆ ಮಾಡಿತ್ತು. ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಗಿತ್ತು. ಭಕ್ತರು ತಮ್ಮ ಇಷ್ಟ ದೇವರುಗಳ ಮೊರೆ ಹೋಗಿದ್ದರು.

ಈ ವೇಳೆ ತಾಲೂಕಿನ ದೇವಾಲಯವೊಂದರಲ್ಲಿ ಪವಾಡ ನಡೆದಿದೆ.‌ ವಿಗ್ರಹ ಮೂರ್ತಿ ಕಣ್ಣು ತೆರೆದ ರೀತಿಯಲ್ಲಿ ಭಕ್ತರಿಗೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಇದರಿಂದ ಭಕ್ತರು ಕೆಲಕಾಲ ದಿಗ್ಭ್ರಮೆಗೊಂಡಿದ್ದಾರೆ. ಇದೊಂದು ಪವಾಡವೆಂದು ಪರಿಗಣಿಸಿ ಸುತ್ತಮುತ್ತಲಿನ ಜನತೆ ದೇವರ ದರ್ಶನ ಪಡೆದಿದ್ದಾರೆ.

ತಾಲೂಕಿನ ಕಾಡನೂರು ಗ್ರಾಮದ ಮಹೇಶ್ವರಮ್ಮ ದೇವಸ್ಥಾನದಲ್ಲಿನ ಮಹೇಶ್ವರಮ್ಮ ವಿಗ್ರಹ ಕಣ್ಬಿಟ್ಟಿದ್ದು, ದೇವರ ಪವಾಡವೆಂದು ಜನರು ದೇವರ ದರ್ಶನ ಪಡೆಯುತ್ತಿದ್ದಾರೆ.

ಇಷ್ಟು ದಿನ ಸಾಮಾನ್ಯವಾಗಿ ಕಣ್ಣ್ಮುಚ್ಚಿದ ರೀತಿಯಲ್ಲಿ‌ ಇದ್ದ‌ ವಿಗ್ರಹ ಮೂರ್ತಿ ನಿನ್ನೆ‌ ಸಂಜೆ ದಿಢೀರನೆ ಕಣ್ಣು ತೆರೆದು ಭಕ್ತರಲ್ಲಿ ದಿಗ್ಭ್ರಾಂತಿ ಮೂಡಿಸಿದೆ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!