ಇಂದು ಲೋಕಾಯುಕ್ತ ಅಧಿಕಾರಿಗಳು ದೊಡ್ಡಬಳ್ಳಾಪುರ ಸೇರಿ ರಾಜ್ಯದ 12 ಅಧಿಕಾರಿಗಳ ಮನೆಗಳಲ್ಲಿ ತಲಾಶ್ ನಡೆಸಿದ್ದಾರೆ. ಅದರಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿರುವ ಹಿರಿಯ ಪಶುವೈದ್ಯ ಆರ್. ಸಿದ್ದಪ್ಪ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಈ ಅಧಿಕಾರಿಗೆ ಸಂಬಂಧಿಸಿದ ಒಟ್ಟು 5 ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿದ್ದಾರೆ.
ಈ ವೇಳೆ 9 ನಿವೇಶನಗಳು, 3 ವಾಸದ ಮನೆಗಳು, 5 ಎಕರೆ ಕೃಷಿ ಜಮೀನು, 3,65,000- ನಗದು, ರೂ. 11,68,823- ಬೆಲೆ ಬಾಳುವ ಚಿನ್ನಾಭರಣಗಳು, ರೂ 12,35,000- ಬೆಲೆಬಾಳುವ ವಾಹನಗಳು, ರೂ. 4,50,000 ಬೆಲೆಬಾಳುವ ಇತರೆ ವಸ್ತುಗಳು. ಎಲ್ಲಾ ಸೇರಿ ಒಟ್ಟು ಆಸ್ತಿ ಮೌಲ್ಯ- ರೂ 2,93,53,823 ಇದೆ ಎಂದು ತಿಳಿದುಬಂದಿದೆ.