ಮಹಿಳೆ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನೆಲಮಂಗಲ ತಾಲೂಕಿನ ಎಲೆಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಅಣ್ಣ ತಮ್ಮಂದಿರು ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಈ ಮಹಿಳೆಯ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಮರಳಕುಂಟೆ ಗ್ರಾಮದ ನಾಗೇಶ್(28) ಕೊಲೆಯಾದ ದುರ್ದೈವಿ. ಮೃತ ನಾಗೇಶ್ ಚಿಕ್ಕಪ್ಪನ ಮಗನಾದ ನವೀನ್ ಎಂಬಾತನಿಂದ ಕೊಲೆಯಾಗಿದೆ.
ಮಹಿಳೆ ಜೊತೆ ಸಂಬಂಧ ವಿಚಾರವಾಗಿ ತಡರಾತ್ರಿ ಇಬ್ಬರ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ.
ಕೊಲೆ ಮಾಡಿ ಸ್ಥಳದಲ್ಲೇ ಇದ್ದ ಕೊಲೆ ಆರೋಪಿ ನವೀನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.