ರೈಲ್ವೆ ಹಳಿ ಮೇಲೆ ಓಡಾಡುತ್ತಿದ್ದ ಮೇಕೆಗಳನ್ನು ರಕ್ಷಿಸಲು ಹೋಗಿ ರೈಲಿಗೆ ಸಿಲುಕಿ ಗಂಡ-ಹೆಂಡತಿ ಸಾವನ್ನಪ್ಪಿರುವ ಘಟನೆ ಮಾಕಳಿ ವಡ್ಡರಹಳ್ಳಿ ರೈಲ್ವೆ ನಿಲ್ದಾಣ ಹಾಗೂ ಮಾಕಳಿ ರೈಲ್ವೆ ನಿಲ್ದಾಣ ಮಾರ್ಗ ಮಧ್ಯೆಯ ಗೋಶಾಲೆ ಬಳಿ ನಡೆದಿದೆ.
ತಾಲೂಕಿನ ಕೆಳಗಿನನಾಯಕರಂಡನಹಳ್ಳಿ ನಿವಾಸಿಗಳಾದ ಚಂದ್ರನಾಯಕ್ (ಪಿಯಾ ನಾಯಕ್) ಹಾಗೂ ಜಯಬಾಯಿ ಸಾವನ್ನಪ್ಪಿರುವ ಮೃತ ದುರ್ದೈವಿಗಳು.
ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.