ತನ್ನ ಕುಟುಂಬವನ್ನ ಕಳೆದುಕೊಂಡ ವೃದ್ಧೆ ಹಾದಿ ಬೀದಿಯಲ್ಲಿ ಬೇಡಿ ತಿನ್ನುತ್ತಾ, ರಸ್ತೆ ಬದಿಯಲ್ಲಿ ಕೂತು ಕಂಡ ಕಂಡವರನ್ನ ಸಹಾಯ ಕೇಳಿ ಪರದಾಡುತ್ತಿದ್ದ ವೃದ್ದೆಯನ್ನ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಕಂಡು ವೃದ್ದೆಗೆ ಸಹಾಯ ಹಸ್ತ ನೀಡಿದ್ದಾರೆ… ಅಸಹಾಯಕ ವೃದ್ದೆಗೆ ಸಹಾಯ ಹಸ್ತ ನೀಡಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು… ಶ್ರೀರಂಗಪಟ್ಟಣದ ಮೂಲದ ಲಕ್ಷ್ಮಮ್ಮ ಎಂಬ ಮಹಿಳೆ ಮೂವತ್ತು ವರ್ಷದ ಹಿಂದೆ ಚಿಕ್ಕಬಳ್ಳಾಪುರಕ್ಕೆ ವಲಸೆ ಬಂದು ನಿಮ್ಮಕಲಕುಂಟೆ ಗ್ರಾಮದಲ್ಲಿ ವಾಸವಾಗಿರ್ತಾಳೆ. ಇತ್ತೀಚೆಗೆ ಗಂಡ ಮಕ್ಕಳು ತೀರಿ ಹೋಗಿದ್ದು, ಮನೆ ಮಠ ಇಲ್ಲದೆ ಕೂಲಿ ನಾಲಿ ಮಾಡಿ ಹೊಟ್ಟೆ ತುಂಬಿಸಿಕೊಂಡು ದೇವಸ್ಥಾನದ ಅವರಣದಲ್ಲಿ ಜೀವನ ಮಾಡ್ತಿದ್ದಳು. ಕಾಲ ಕಳೆದಂತೆ ವಯಸ್ಸಾಗಿ ದುಡಿಯಲು ಕೈಲಾಗದೆ ಬೇಡಿ ತಿನ್ನುತ್ತಾ ಜೀವನ ಸಾಗಿಸುತ್ತಿದ್ದಳು. ಕಂಡ ಕಂಡವರ ಬಳಿ ಸಹಾಯ ಮಾಡುವಂತೆ ಅಂಗಲಾಚುತ್ತಿದ್ದಳು. ಈ ವೃದ್ಧಿ ಅಸಹಾಯಕತೆ ಕಂಡ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂಜುಂಡಯ್ಯ, ಮಹಿಳೆಯ ಬಳಿ ಹೋಗಿ ವಿಚಾರಿಸಿದಾಗ, ಮಳೆ ಗಾಳಿಗೆ ರಸ್ತೆಯಲ್ಲಿ ಕೂರಲಾಗುತ್ತಿಲ್ಲ, ಜೊತೆಗೆ ಜೀವನ ಪರ್ಯಾಂತ ದುಡಿದ ಒಂದು ಲಕ್ಷ ಹಣ ಬಳಿ ಇದ್ದು, ದರೋಡೆಯ ಭಯದಿಂದ ಬದುಕಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.
ಕೂಡಲೇ, ಪೊಲೀಸ್ ಅಧಿಕಾರಿ ಮಹಿಳೆ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಆ ಹಣ ಖಾತೆಯಲ್ಲಿರಿಸಿದ್ದು, ಶ್ರೀನಿವಾಸಪುರದ ಆಶ್ರಮವೊಂದರಲ್ಲಿ ವಿಚಾರಿಸಿ ಅಮ್ಮ ಆಂಬುಲೆನ್ಸ್ ಸಹಾಯದಿಂದ ಆಶ್ರಮಕ್ಕೆ ಕಳುಹಿಸಿ ಕೊಟ್ಟಿದ್ದಾರೆ…
PSI ನಂಜುಂಡಯ್ಯ ಮಾಡಿದ ಈ ಸಹಾಯಕ್ಕೆ ವೃತ್ತ ನಿರೀಕ್ಷಕ ಮಂಜುನಾಥ್ ಶ್ಲಾಘೀಸಿದ್ದಾರೆ…
ಇನ್ನು, ವೃದ್ದೆ ಈ ಹಿಂದೆ ವಾಸವಿದ್ದ ಸುತ್ತಮುತ್ತಲಿನ ಜನರು ಕುಟುಂಬದ ಸದಸ್ಯರನ್ನ ದೂರದ ಊರಿಗೆ ಕಳಿಸುವ ಹಾಗೆ ಕಣ್ಣೀರುಸುರಿಸಿ ಭಾವನಾತ್ಮಕ ಬೀಳ್ಕೊಡುಗೆ ಕೊಟ್ಟಿದ್ದು ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುವಂತಿತ್ತು..