ಡೆಂಗಿ ಪತ್ತೆ ಹಚ್ಚುವ ಎಲಿಸಾ ಮತ್ತು ರಾಪಿಡ್ ಟೆಸ್ಟ್ ಗಳಿಗೆ ನಿಗದಿ: ಎಲಿಸಾ ಪರೀಕ್ಷೆಗೆ 300 ರೂ. ಹಾಗೂ ರಾಪಿಡ್ ಪರೀಕ್ಷೆಗೆ 250 ರೂ. ನಿಗದಿ

ರಾಜ್ಯದಲ್ಲಿ ಡೆಂಗಿ ಜ್ವರ ಹೆಚ್ಚಿರುವ ಹಿನ್ನೆಲೆಯಲ್ಲಿ ಡೆಂಗಿ ಪತ್ತೆ ಹಚ್ಚುವ ಎಲಿಸಾ ಮತ್ತು ರಾಪಿಡ್ ಟೆಸ್ಟ್ ಗಳಿಗೆ ಈ ಕೆಳಗಿನಂತೆ ದರ ನಿಗದಿ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಲಾಗಿದೆ.

ಎಲಿಸಾ ಪರೀಕ್ಷೆಗೆ 300 ರೂಪಾಯಿ ಹಾಗೂ ರಾಪಿಡ್ ಪರೀಕ್ಷೆಗೆ 250 ರೂಪಾಯಿ ನಿಗದಿಗೊಳಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳು ಈ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಡೆಂಗಿ ಹೆಚ್ಚಿರುವ ಈ ಸಂದರ್ಭದಲ್ಲಿ ಸರ್ಕಾರದೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಎಲ್ಲರೂ ಜೊತೆಯಾಗಿ ಡೆಂಗಿ ವಿರುದ್ಧ ಹೋರಾಡೋಣ. ಡೆಂಗಿಯನ್ನು ಸೋಲಿಸೋಣ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *