ಮದುವೆ ಆಗಲು ನಿರಾಕರಿಸಿದ್ದಕ್ಕೆ ವೈದ್ಯೆಯೊಬ್ಬರು ಗೆಳೆಯನ ಖಾಸಗಿ ಅಂಗ ಕತ್ತರಿಸಿದ ಘಟನೆ ಬಿಹಾರದ ಸರನ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ನಡೆದಿದೆ. ವೈದ್ಯೆಯನ್ನು ಲೈಂಗಿಕವಾಗಿ ಬಳಸಿ ಕೈ ಕೊಟ್ಟಿದ್ದ ಬಾಯ್ ಫ್ರೆಂಡ್ ಎನ್ನಲಾಗಿದೆ. ಸಿಟ್ಟಿಗೆದ್ದ ವೈದ್ಯ ಚಾಕುವಿನಿಂದ ಗೆಳೆಯನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾರೆ.
ಸದ್ಯ ಕೊಲೆ ಯತ್ನದ ಆರೋಪದ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಧುರಾ ಬ್ಲಾಕ್‌ನ ವಾರ್ಡ್ ನಂ. 12 ರ ಕೌನ್ಸಿಲರ್ ಸಂತ್ರಸ್ತ ಪ್ರಸ್ತುತ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (PMCH) ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಜೋಡಿ ಕಳೆದ ಐದು ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದರು, ಆದರೆ ಯುವಕನಿಗೆ ಗೆಳತಿಯನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಅವಳು ಅಂತಿಮವಾಗಿ ನ್ಯಾಯಾಲಯದಲ್ಲಿ ಮದುವೆಗೆ ಒಪ್ಪಿಕೊಳ್ಳುವಂತೆ ಮನವೊಲಿಸಿದಳು, ಆದರೆ ಅವನು ನಿಗದಿತ ದಿನದಂದು ಹಾಜರಾಗಲಿಲ್ಲ.
ನರ್ಸಿಂಗ್ ಹೋಮ್‌ಗೆ ಬಾಯ್ ಫ್ರೆಂಡ್ ಕರೆದ ವೈದ್ಯೆ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿದ್ದಾರೆ. ಬಳಿಕ ಬಾಯ್ ಫ್ರೆಂಡ್‌ಗೆ ತೀವ್ರ ರಕ್ತಸ್ರಾವ ಆಗಿದ್ದು, ಪಾಟ್ನಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆತನ ಕೂಗು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.