ಹೈದರಾಬಾದ್ ನ ಮಣಿಕೊಂಡದ ಚಿತ್ರಪುರಿ ಬೆಟ್ಟದಲ್ಲಿ ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಸುಮಾರು 15ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಕ್ಕಳ ಮೇಲಷ್ಟೇ ಅಲ್ಲ, ದೊಡ್ಡವರ ಮೇಲೂ ಬೀದಿ ನಾಯಿಗಳ ದಾಳಿ ಸರ್ವೇ ಸಾಮಾನ್ಯವಾಗಿದೆ.
ಮಹಿಳೆ ಗಾಬರಿಗೊಂಡು ನಾಯಿಗಳು ಓಡಿಸುತ್ತಾ, ಸಹಾಯಕ್ಕಾಗಿ ಕಿರುಚಾಡುತ್ತಾ ಇದ್ದರು. ಆಕ್ರಮಣಕಾರಿ ನಾಯಿಗಳನ್ನು ಹಿಮ್ಮೆಟ್ಟಿಸಲು ಚಪ್ಪಲಿಯನ್ನು ಬಳಸಿದಳು.
ಮಹಿಳೆ ಮೇಲೆ ನಾಯಿಗಳು ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.