ಮಾರ್ಚ್ 8ರಂದು ಮಹಿಳಾ ದಿನಾಚರಣೆ ಪ್ರಯುಕ್ತ ಸಾರಥಿ ಸತ್ಯಪ್ರಕಾಶ್ ರಿಂದ ಮೆಡಿಕಲ್ ಕಿಟ್, ಕನ್ನಡಕ, ಶ್ರವಣಯಂತ್ರ ವಿತರಣೆ

ಮಾರ್ಚ್ 8ರಂದು ಮಹಿಳಾ ದಿನಾಚರಣೆ ಪ್ರಯುಕ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕೆ.ವಿ.ಸಾರಥಿ ಸತ್ಯಪ್ರಕಾಶ್ ಅವರು ಒಕ್ಕಲಿಗ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ಕಣ್ಣಿನ ದೋಷ ಉಳ್ಳವರಿಗೆ ಕನ್ನಡಕಗಳು, ಶ್ರವಣದೋಷ ಉಳ್ಳವರಿಗೆ ಆತ್ಯಾಧುನಿಕ ಶ್ರವಣಯಂತ್ರಗಳು ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಮೆಡಿಕಲ್ ಕಿಟ್ ಗಳನ್ನು ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸಿ ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಟಿಎನ್ ನಾಗರಾಜು, ನಗರ ಘಟಕ ಅಧ್ಯಕ್ಷ ಶಿವಶಂಕರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಕ್ಷೀನಾರಾಯಣ, ಮುಖಂಡರಾದ ಕೆಟಿ ಕೃಷ್ಣಪ್ಪ ಸೇರಿದಂತೆ ತಾಲೂಕಿನ ಬಿಜೆಪಿ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದು ಸತ್ಯಪ್ರಕಾಶ್ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ನಗರದ ಭಗತ್ ಸಿಂಗ್ ಮೈದಾನದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಮಾಡಿದ್ದರು. ಶಿಬಿರದಲ್ಲಿ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಕಣ್ಣು, ಕಿವಿ ದೋಷಗಳುಳ್ಳವರಿಗೆ ನಾಳೆ ಕನ್ನಡಕ ಮತ್ತು ಶ್ರವಣ ದೋಷ ಯಂತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ‌ ಮಾಡಿರುವ ಸಾರಥಿ ಸತ್ಯಪ್ರಕಾಶ್.

Leave a Reply

Your email address will not be published. Required fields are marked *