ಕುಮಾರಸ್ವಾಮಿ ಉದ್ಘಾಟಿಸಿದ ವಕ್ಕಲೇರಿ ಡೇರಿಯಲ್ಲಿ ಸಂಭ್ರಮಾಚರಣೆ

ಕೋಲಾರ: ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಕಳೆದ ವರ್ಷ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉದ್ಘಾಟಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಭಾನುವಾರ ಸಂಜೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ವಕ್ಕಲೇರಿ ಡೇರಿಯ ಸಭಾಂಗಣದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು ನೇತೃತ್ವದಲ್ಲಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚೌಡೇಶ್ವರಿ ರಾಮು ರಾಜ್ಯದಲ್ಲಿ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಬಡವರ, ರೈತರ, ಮಹಿಳೆಯರು ಧ್ವನಿಯಾಗಿ ಕೆಲಸ ಮಾಡಿದ್ದಾರೆ ಹಾಲು ಉತ್ಪಾದಕರ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲಿಗೂ ಪೋತ್ಸಾಹ ಧನ ನೀಡುವಂತೆ ಮಾಡಿದ್ದಾರೆ ರೈತ ಸಾಲಮನ್ನಾ ಅಂತಹ ಜನಪರವಾದ ಯೋಜನೆಗಳನ್ನು ರೂಪಿಸಿದ್ದಾರೆ ಪ್ರಸ್ತುತ ಕೇಂದ್ರ ಸಚಿವರಾಗಿ ಬಯಲುಸೀಮೆ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ ಶಾಶ್ವತ ಕುಡಿಯುವ ನೀರು ಒದಗಿಸುವ ಸಂಕಲ್ಪ ಮಾಡಲಿದ್ದು ಜೊತೆಗೆ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿರುವ ನರೇಂದ್ರ ಮೋದಿ ಹಾಗೂ ನೂತನ ಸಂಸದ ಮಲ್ಲೇಶ್ ಬಾಬು ಅವರಿಗೆ ಇದೇ ಸಂದರ್ಭದಲ್ಲಿ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ವಿಸ್ತಾರಣಾಧಿಕಾರಿ ಶ್ರೀನಿವಾಸಗೌಡ, ವಕ್ಕಲೇರಿ ಹಾಲು ಡೇರಿ ಉಪಾಧ್ಯಕ್ಷ ಅಂಜಿನಪ್ಪ ನಿರ್ದೇಶಕರಾದ ಶ್ರೀನಿವಾಸ್, ಸದಾಶಿವ, ರತ್ನಮ್ಮ ಗೋವಿಂದಮ್ಮ, ರಾಮಚಂದ್ರಪ್ಪ, ಹನುಮಂತ, ಮಂಜುನಾಥ್, ದೇವರಾಜ್, ಕಾರ್ಯದರ್ಶಿ ನಾಗರಾಜ್ ಸಹಾಯಕ ಮಾರ್ಕೊಂಡಪ್ಪ, ಮುಖಂಡ ವಕ್ಕಲೇರಿ ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಹಾಲು ಉತ್ಪಾದಕರ ಇದ್ದರು

Leave a Reply

Your email address will not be published. Required fields are marked *