ಅಂತೂ ಇಂತು ಈ ಊರಿಗೆ ಬಂತು ಬಸ್: ಗ್ರಾಮಸ್ಥರಲ್ಲಿ ಸಂತಸ

ದೊಡ್ಡಬಳ್ಳಾಪುರ, ತೂಬಗೆರೆ ಹಾಗೂ ಲಕ್ಷ್ಮೀದೇವಿಪುರ ಮಾರ್ಗವಾಗಿ ಸಂಚರಿಸುವ ಬಸ್ ಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ.

ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿಕೊಂಡಿರುವ ಗ್ರಾಮಸ್ಥರ ಮುಖದಲ್ಲಿ‌ ಸಂತಸ ಎದ್ದು ಕಾಣುವಂತಾಗಿದೆ. ದೊಡ್ಡಬಳ್ಳಾಪುರದಿಂದ ತೂಬಗೆರೆಗೆ ಹೋಗುವ ಎಲ್ಲಾ ಬಸ್ ಗಳು ಹಾಡೋನಹಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದವು.‌ ಲಕ್ಷ್ಮೀದೇವಿಪುರ ಗ್ರಾಮದ ಜನತೆ ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡು ಬಸ್ ಹಿಡಿಯಬೇಕಿತ್ತು. ಈ ಹಿನ್ನೆಲೆ ಗೀತಾ ಅಶೋಕ್ ಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಹಲವು ಬಾರಿ ಮನವಿಗಳನ್ನು ಕೊಟ್ಟಿದ್ದರಿಂದ ಈ‌ಗ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಗ್ಗೆ 8:30, ಮಧ್ಯಾಹ್ನ 12, ಸಂಜೆ 4 ಹಾಗೂ 7ಗಂಟೆ ಸಮಯದಲ್ಲಿ ಈ ಬಸ್ ಸಂಚರಿಸಲಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಅಧಿಕಾರಿಗಳು, ಮುದ್ದುಕೃಷ್ಣಪ್ಪ, ಹನುಮಂತರಾಯಪ್ಪ, ಪುರುಷೋತ್ತಮ, ಅಶೋಕ್ ಕುಮಾರ್, ನಟರಾಜ್, ಬಾಬು, ಶಿವಕುಮಾರ್, ಶಿವರಾಜ್, ಮುನಿರಾಜ್, ಕನಕರಾಜ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *