ಶಾಸಕ ಮಾಡಾಳ್ ಪುತ್ರನ ಲಂಚಾವತಾರ ಪ್ರಕರಣ; ಪ್ರಕರಣ ತನಿಖೆ ಹಂತದಲ್ಲಿದೆ; ಪಕ್ಷಕ್ಕೆ ಯಾವ ಹಾನಿ ಆಗಲ್ಲ-ಗೃಹ ಸಚಿವ ಆರಗ ಜ್ಞಾನೇಂದ್ರ

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚ ಸ್ವೀಕಾರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಿಂದ ಬಿಜೆಪಿಗೆ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಕರಣದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಈ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಲಂಚ ಸ್ವೀಕರಿಸುತ್ತಿದ್ದ ವೇಳೆ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಕೈಗೆ ಸಿಕ್ಕಿಬಿದಿದ್ದಾರೆ ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಲಿದೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ಹಣ ಕಾನೂನು ಬಾಹಿರವಾಗಿದ್ದರೇ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು,

ಮಾಡಾಳ್ ವಿರುಪಾಕ್ಷಪ್ಪ ಪುತ್ರ ಲಂಚ ಸ್ವೀಕಾರ ವಿಚಾರ ತಿಳಿಯುತ್ತಿದ್ದಂತೆ ಶಾಸಕ ವಿರೂಪಾಕ್ಷಪ್ಪ ಈಗಾಗಲೇ ನೈತಿಕ ಹೊಣೆಹೊತ್ತು ಕೆ. ಎಸ್. ಡಿ.ಎಲ್ ಗೆ ರಾಜಿನಾಮೆ ನೀಡಿದ್ದಾರೆ, ಮಾನ್ಯ ಮುಖ್ಯಂಮತ್ರಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ್ದೂ ಪಾರದರ್ಶಕ ತನಿಖೆ ನಡೆಯಲಿದೆ.

ಲೋಕಾಯುಕ್ತ ಕತ್ತು ಹಿಸುಕಿದ್ದ ಕಾಂಗ್ರೆಸ್ ಪಕ್ಷ :

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ಕುತ್ತಿಗೆ ಹಿಸುಕಿ ಕುಳಿತಿದ್ದರು, ಆಗ ಲೋಕಾಯುಕ್ತ ಇದ್ದಿದ್ದರೇ ಕಾಂಗ್ರೆಸ್ ನ ಹಲವು ಪ್ರಮುಖರು ಇಂದು ಜೈಲಿನಲ್ಲಿರಬೇಕಿತ್ತು, ನಾವು ಇಂದು ಲೋಕಾಯುಕ್ತಕ್ಕೆ ಸಂಪೂರ್ಣ ಶಕ್ತಿ ನೀಡಿದ್ದೇವೆ ಹೀಗಾಗಿ ರೈಡ್ ಗಳು ನಡೆಯುತ್ತಿದೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಎಂಬ ವ್ಯತ್ಯಾಸವಿಲ್ಲ ಎಂದರು.

ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡರ ಮನೆ ಮತ್ತು ಕಚೇರಿಗಳಲ್ಲಿ ಕಂತೆ ಕಂತೆ ದುಡ್ಡು ಸಿಕ್ಕಿರುವ ಉದಾಹರಣೆಗಳಿವೆ, ಇಷ್ಟೆಲ್ಲ ಆಗಿದ್ದರೂ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಕಿತ್ತಾಟ :

ಐಎಎಸ್ ಅಧಿಕಾರಿ ರೋಹಿಣಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಇಬ್ಬರ ಜಗಳದಿಂದ ಈಗಾಗಲೇ ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ, ಇಬ್ಬರಿಗೂ ಎರಡುಮೂರು ಬಾರಿ ಎಚ್ಚರಿಕೆ ನೀಡಿದ್ದರೂ ಮುಂದುವರೆಸಿದ್ದಾರೆ, ಇವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ, ಇಬ್ಬರಿಗೂ ಇನ್ನೂ ಯಾವ ಪೋಸ್ಟ್ ನೀಡಿಲ್ಲ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಂದ ಮೋಸ:

ಸೈಬರ್ ಕ್ರೈಮ್ ಪ್ರಕರಣಗಳು ಈಗಾಗಲೆ ಹೆಚ್ಚುತ್ತಿದ್ದೂ ಸೈಬರ್ ಕ್ರೈಮ್ ವಿಭಾಗವನ್ನು ಗಟ್ಟಿಗೊಳಿಸಿದ್ದೇವೆ ಮತ್ತು ಸಾರ್ವಜನಿಕರು ಕೂಡ ಇದಕ್ಕೆ ಸಹಕರಿಸಬೇಕಾಗುತ್ತದೆ, ಸೈಬರ್ ವಂಚನೆಗೊಳಗಾದ ( ಗೋಲ್ಡನ್ ಹವರ್ ) ಎರಡು ಗಂಟೆಗಳ ಒಳಗೆ 112 ಗೆ ಕರೆ ಮಾಡಿ ವಿವರ ನೀಡಿದರೆ ಅಕೌಂಟ್ ಫ್ರೀಜ್ ಮಾಡಲಾಗುವುದು ಇದರಿಂದ ಅನಾಹುತ ತಡೆಯಲು ಸಹಕಾರಿಯಾಗಲಿದೆ. ಈ ಕುರಿತು ಜನಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಎಲ್ಲಾ ರೀತಿಯಿಂದಲೂ ಕ್ರಮ ಕೈಗೊಳ್ಳುತ್ತಿದೆ ಎಂದರು.

ಇಡೀ ಭಾರದಲ್ಲೇ ಕರ್ನಾಟಕ ಸೈಬರ್ ಪೊಲೀಸ್ ವಿಭಾಗ ಅಗ್ರ ಸ್ಥಾನದಲ್ಲಿದೆ, ಇದಕ್ಕಾಗಿ ಸಿಐಡಿ ಇಲಾಖೆಯ ಕಟ್ಟಡದಲ್ಲಿ ಒಂದು ಫ್ಲೋರ್ ನ್ನು ಸಕಲ ಸಲಕರಣೆಗಳಿಂದ ಸಿದ್ಧಗೊಳಿಸಲಾಗಿದೆ, ಬೇರೆ ಬೇರೆ ರಾಜ್ಯದ ತಂಡಗಳು ಬಂದು ಇಲ್ಲಿ ಅಧ್ಯಯನ ಮಾಡುವಷ್ಟು ಅಭಿವೃದ್ದಿ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *