ಇ-ಕಾರ್ಟ್ ಕಚೇರಿಯಲ್ಲಿ ಕಳ್ಳತನ: ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಂತ್ರಜ್ಞರು ಭೇಟಿ, ಪರಿಶೀಲನೆ

ನಗರದ ಕೋರ್ಟ್ ರಸ್ತೆ ಸಮೀಪವಿರುವ ಇ-ಕಾರ್ಟ್ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ಎಂಟು ಲಕ್ಷ ರೂ. ನಗದು ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ಭಾನುವಾರ ರಾತ್ರಿ ಸುಮಾರು 2.30ರ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಶಟರ್ ಬಾಗಿಲು ಮೀಟಿದ ದುಷ್ಕರ್ಮಿಗಳು ಲಾಕರ್ ನಲ್ಲಿದ್ದ ಸುಮಾರು ಎಂಟು ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಂತ್ರಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ಲಾಕರ್‌ನ ಬೀಗ ತೆಗೆದು ಪಾಸ್‌ವರ್ಡ್ ಬಳಸಿ ಹಣ ದೋಚಿದ್ದರಿಂದ ಕಚೇರಿಯಲ್ಲಿ ಕೆಲಸ ಮಾಡುವವರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *