ವಿಶೇಷವಾಗಿ ವಿನ್ಯಾಸಗೊಳಿಸಿದ ಜೀನ್ಸ್ ಮತ್ತು ಟೀ ಶರ್ಟ್ಗಳ ಪದರಗಳಲ್ಲಿ ಅಂಟಿಸಿ ಅರೆ-ಪೌಡರ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ ನಾಲ್ಕು ಪ್ರಯಾಣಿಕರನ್ನು (3 ಪುರುಷರು ಮತ್ತು 1 ಮಹಿಳೆ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ದುಬೈನಿಂದ ಇಕೆ-568 ವಿಮಾನದ ಮೂಲಕ ಬೆಂಗಳೂರಿಗೆ ಈ ನಾಲ್ಕು ಮಂದಿ ಪ್ರಯಾಣಿಕರು ಬಂದಿಳಿದಿದ್ದರು. ಆಗ ಸೂಕ್ತ ತಪಾಸಣೆ ನಡೆಸಿ 1.96 ಕೋಟಿ ಮೌಲ್ಯದ ಒಟ್ಟು 2814.36 ಗ್ರಾಂ ತೂಕದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಅದೇರೀತಿ, ದುಬೈನಿಂದ IX384 ಮೂಲಕ ಆಗಮಿಸಿದ ಏರ್ ಪ್ರಯಾಣಿಕ ಮೂರು ಅಂಡಾಕಾರದ ರೂಪದಲ್ಲಿ 59.3 ಲಕ್ಷ ಮೌಲ್ಯದ 24 Ktನ 828 ಗ್ರಾಂ ಚಿನ್ನವನ್ನು ಮರೆಮಾಚಿ ಸಾಗಾಟ ಮಾಡಲು ಯತ್ನಿಸಿದಾಗ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಪಡೆದಿದ್ದಾರೆ. ಕೂಡಲೇ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.