ಬಾಗಲಕೋಟೆಯಲ್ಲಿ ಏ.29ರಂದು ನಡೆದ ಬಿಜೆಪಿ ಸಮಾವೇಶದಲ್ಲಿ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಮತ್ತವರ ತಾಯಿ ಹೀರಾಬೆನ್ ಇದ್ದ ಭಾವಚಿತ್ರವನ್ನು ಮೋದಿಯವರಿಗೆ ಕಾಣಿಸುವಂತೆ ಪ್ರದರ್ಶಿಸಿದರು.
ಬಾಲಕಿಯ ಪ್ರದರ್ಶಿಸಿದ ಭಾವಚಿತ್ರವನ್ನು ಗಮನಿಸಿದ ಪ್ರಧಾನಿ ಮೋದಿ ಭಾಷಣದ ನಡುವೆಯೇ ಅಂಗರಕ್ಷಕರ ಮೂಲಕ ಫೋಟೊವನ್ನು ತರಿಸಿಕೊಂಡರು.
ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಜೊತೆಗಿರುವ ಭಾವಚಿತ್ರವನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಬಾಲಕಿಯ ಹೆಸರು ನಾಗರತ್ನಾ ಮೇಟಿ. ಇವರು ನವನಗರ 42 ನೇ ಸೆಕ್ಟರ್ ನಿವಾಸಿಯಾಗಿದ್ದಾರೆ.
ಫೋಟೊ ಸ್ವೀಕರಿಸಿದ ಬಳಿಕ ಬಾಲಕಿಗೆ ಪತ್ರ ಬರೆಯುವುದಾಗಿ ಮೋದಿ ಹೇಳಿದ್ದರು. ಕೊಟ್ಟ ಮಾತಿನಂತೆ ಯುವತಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರ ಬರೆದಿದ್ದಾರೆ. ಪೋಸ್ಟ್ ಮೂಲಕ ಯುವತಿಗೆ ಇಂದು ಮೋದಿ ಅವರು ಬರೆದ ಪತ್ರ ತಲುಪಿದೆ.
ಪತ್ರದ ವಿವರ..
ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದ್ದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಕೆಲಸವು ಮಾನವ ಭಾವನೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ..
ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ. ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳೊಂದಿಗೆ. ಇಂತಿ, ನಿಮ್ಮ ನರೇಂದ್ರ ಮೋದಿ.. ಎಂದು ಉಲ್ಲೇಖಿಸಿದ್ದಾರೆ.