ನಿಂತಿದ್ದ ಲಾರಿಗೆ ಗೂಡ್ಸ್ ವಾಹನ ಡಿಕ್ಕಿ: ಡಿಕ್ಕಿ ರಭಸಕ್ಕೆ ಗೂಡ್ಸ್ ವಾಹನ ಪಲ್ಟಿ: ಪಲ್ಟಿಯಾದ ವಾಹನದಲ್ಲಿ ಸಿಕ್ತು 7 ಕೋಟಿ ಹಣ: ಆಶ್ಚರ್ಯಚಕಿತರಾದ ಅಧಿಕಾರಿಗಳು

ನಿಂತಿದ್ದ ಲಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಗೂಡ್ಸ್ ವಾಹನ ಪಲ್ಟಿಯಾಗಿದೆ. ಪಲ್ಟಿಯಾದ ಗೂಡ್ಸ್ ವಾಹನದಲ್ಲಿ ಸುಮಾರು 7 ಕೋಟಿ ರೂಪಾಯಿ ಪತ್ತೆಯಾಗಿದೆ. ಹಣ ಪತ್ತೆಯಾದಾಗ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಆಶ್ಚರ್ಯಚಕಿತರಾದ್ದಾರೆ.ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಮಿನಿ ಗೂಡ್ಸ್ ಕ್ಯಾರಿಯರ್ ಪೂರ್ವ ಗೋದಾವರಿ ಹೆದ್ದಾರಿಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.ರಟ್ಟಿನ ಪೆಟ್ಟಿಗೆಗಳಲ್ಲಿ ನೀಟಾಗಿ ಪ್ಯಾಕ್ ಮಾಡಲಾಗಿದ್ದ ನಗದು ಅವಶೇಷಗಳ ನಡುವೆ ಪತ್ತೆಯಾಗಿದೆ. ನಲ್ಲಜರ್ಲ ಮಂಡಲದ ಅನಂತಪಲ್ಲಿಯಲ್ಲಿ ಗೋಣಿಚೀಲಗಳ ನಡುವೆ ನಗದು ಪೆಟ್ಟಿಗೆಗಳನ್ನು ಸಾಗಿಸಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *