
ಸುಮಾರು 15 -20 ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದ್ದು, ಇಂದು ಬೆಳಕಿಗೆ ಬಂದಿದೆ. 25 ವರ್ಷದ್ದಿರಬಹುದು ಎಂದು ಶಂಕಿಸಲಾಗುತ್ತಿರುವ ಮಹಿಳೆಯ ಮೃತ ಗುರುತು ಸಿಗದಷ್ಟು ಕೊಳೆತು ಹೋಗಿದೆ ಎನ್ನಲಾಗಿದೆ.
ಜಕ್ಕಲಮೊಡಗು ಜಲಾಶಯಕ್ಕೆ ಸಾಗುವ ರಸ್ತೆಯಲ್ಲಿನ ನಾರಸಿಂಹನಹಳ್ಳಿ ಸಮೀಪದ ಪೊದೆಯಲ್ಲಿ ಅರಣ್ಯ ಇಲಾಖೆಯ ಗಾರ್ಡ್‌ಗೆ ಶವ ಕಂಡು ಬಂದಿದ್ದು, ಡಿವೈಎಎಸ್ಪಿ ಪಿ.ರವಿ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತಳ ಗುರುತು, ದಾಖಲೆ, ಮಾಹಿತಿ ಯಾವುದು ಇಲ್ಲವಾಗಿರುವುದರಿಂದ ಪ್ರಕರಣ ಭೇದಿಸುವುದು, ಹಂತಕರ ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ ಎನ್ನಲಾಗುತ್ತಿದೆ.