ತಮಿಳುನಾಡಿನಲ್ಲಿ 7 ತಿಂಗಳ ಮಗುವೊಂದು ನಾಲ್ಕನೆ ಮಹಡಿಯಿಂದ ಜಾರಿ ರೂಫ್ ಮೇಲೆ ಬಿದ್ದಿದೆ. ಆಗ ಸ್ಥಳಿಯರು ಈ ಮಗುವನ್ನಾ ರಕ್ಷಣೆ ಮಾಡುವ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಅವಡಿ ಬಳಿಯ ತಿರುಮುಲ್ಲೈವಾಯಲ್ನಲ್ಲಿರುವ ಅಪಾರ್ಟ್ಮೆಂಟ್ ಸಂಕೀರ್ಣದ ಎರಡನೇ ಮಹಡಿಯಲ್ಲಿ ಟಿನ್ ಶೀಟ್ನ ಅಂಚಿನಲ್ಲಿ ಮಗು ತೂಗಾಡುತ್ತಿದ್ದು, ಅಲ್ಲಿನ ನಿವಾಸಿಗಳು ಮಗುವನ್ನು ರಕ್ಷಿಸಲು ಹರಸಾಹಸಪಟ್ಟಿದ್ದಾರೆ.
ಕಿಟಕಿಯಿಂದ ಮೊದಲ ಮಹಡಿಯ ಬಾಲ್ಕನಿಗೆ ವ್ಯಕ್ತಿಯೊಬ್ಬರು ಏರುತ್ತಿದ್ದಂತೆ ಮಗು ಬೀಳದಂತೆ ಕೆಳಗಡೆ ಬೀಳದಂತೆ ಜನರು ಬೆಡ್ ಶೀಟ್ ಹಿಡಿದುಕೊಂಡಿದ್ದರು.
ಘಟನೆಯಲ್ಲಿ ಮಗುವಿನ ಕೈ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದೆ.