ನಿಂತಿದ್ದ ಗೂಡ್ಸ್ ರೈಲಿನ ವೀಲ್‌ಸೆಟ್‌ ಮೇಲೆ ಆಟವಾಡುತ್ತಿದ್ದ ಬಾಲಕ: ರೈಲಿನ ಚಕ್ರದ ನಡುವೆ ಸಿಲುಕಿ 100‌ ಕಿ.ಮೀ ಪ್ರಯಾಣಿಸಿದ ಬಾಲಕ: ರೈಲ್ವೇ ರಕ್ಷಣಾ ಪಡೆಯಿಂದ ರಕ್ಷಣೆ

ಉತ್ತರ ಪ್ರದೇಶದ ಲಕ್ನೋದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ರೈಲು ನಿಲ್ದಾಣದ ಬಳಿ‌ ನಿಂತಿದ್ದ ಗೂಡ್ಸ್ ರೈಲನ್ನು ಹತ್ತಿ ಬಾಲಕ ಆಟವಾಡುತ್ತಿದ್ದ, ಸ್ವಲ್ಪ ಹೊತ್ತಲ್ಲೇ ರೈಲು ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಇದರಿಂದ ಕೆಳಗೆ ಇಳಿಯಲು ಬಾಲಕನಿಂದ ಸಾಧ್ಯವಾಗಲಿಲ್ಲ.

ಸುಮಾರು 100 ಕಿ.ಮೀ ದೂರದವರೆಗೆ ರೈಲಿನ ಚಕ್ರಗಳ ನಡುವೆ ಸಿಲುಕಿ ಪ್ರಯಾಣಿಸಿದ. ಕೊನೆಗೆ ರೈಲ್ವೇ ರಕ್ಷಣಾ ಪಡೆ ಗಮನಿಸಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಬಾಲಕ ಶಿಶುಪಾಲನಾ ಕೇಂದ್ರದಲ್ಲಿದ್ದಾನೆ.

ಉನ್ನತ ಮೂಲಗಳ ಪ್ರಕಾರ, ಲಕ್ನೋದ ರೈಲ್ವೆ ನಿಲ್ದಾಣದ ಬಳಿ ವಾಸಿಸುವ ಸುಮರು 8-10 ವರ್ಷದ ಬಾಲಕ ಆಟವಾಡುತ್ತಿದ್ದಾಗ ಗೂಡ್ಸ್ ರೈಲಿನ ಚಕ್ರದ ವಿಭಾಗಕ್ಕೆ ಸಿಲುಕಿದನು. ನಂತರ ಗೂಡ್ಸ್ ರೈಲು ಪಯಣ ಬೆಳೆಸಿತು, ಅದು ಹುಡುಗನನ್ನು ಕೆಳಗಿಳಿಯದಂತೆ ತಡೆಯಿತು.  ಹೀಗಾಗಿ ಗೂಡ್ಸ್ ರೈಲಿನ ಚಕ್ರಗಳಿಗೆ ಸಿಲುಕಿ ಲಕ್ನೋದಿಂದ 100 ಕಿ.ಮೀ ದೂರದಲ್ಲಿರುವ ಹರ್ದೋಯಿ ತಲುಪಿದ್ದಾನೆ.  ಬಾಲಕ ಚಕ್ರದಲ್ಲಿ ಸಿಲುಕಿರುವ ಬಗ್ಗೆ ರೈಲ್ವೆ ಸಿಬ್ಬಂದಿಗೆ ಮಾಹಿತಿ ಬಂದ ನಂತರ ವಾಹನವನ್ನು ಹಾರ್ಡೋಯ್‌ನಲ್ಲಿ ನಿಲ್ಲಿಸಲಾಯಿತು.

ನಂತರ ಘಟನೆಯ ಬಗ್ಗೆ ಹರ್ದ್ವಾರ್ ರೈಲ್ವೆ ರಕ್ಷಣಾ ಪಡೆಗೆ ಮಾಹಿತಿ ನೀಡಲಾಯಿತು. ಹರ್ದೋಯ್ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ನಿಂತ ಬಳಿಕ ರೈಲ್ವೇ ರಕ್ಷಣಾ ಪಡೆ ಬಾಲಕನನ್ನು ರಕ್ಷಿಸಿದೆ.  ನಂತರ ಬಾಲಕನನ್ನು ಹರ್ಡೋಯಿ ಹೊರಠಾಣೆಗೆ ಕರೆತರಲಾಯಿತು. ವಿಚಾರಣೆ ವೇಳೆ ತಾನು ಲಕ್ನೋದ ಬಾಲಾಜಿ ದೇವಸ್ಥಾನದ ನಿವಾಸಿ ಅಜಯ್ ಪುರನ್ ಎಂದು ಬಾಲಕ ಹೇಳಿದ್ದಾನೆ. ಬಾಲಕನನ್ನು ಚಕ್ರದಿಂದ ಹೊರತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *