ದೊಡ್ಡಬಳ್ಳಾಪುರದಲ್ಲಿ ನಿನ್ನೆ ರಾತ್ರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ರಕ್ಷಾ ರಾಮಯ್ಯ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರೋಡ್ ಶೋ ನಡೆಸಿದರು.
ರೋಡ್ ಶೋ ವೇಳೆ ಮೂರು ವರ್ಷದ ಹೆಣ್ಣು ಮಗು ಕಳೆದು ಹೋಗಿತ್ತು, ಪೋಷಕರಿಂದ ಮಿಸ್ ಆಗಿದ್ದ ಹೆಣ್ಣು ಮಗು ಸಿಎಂ ಭದ್ರತೆಗೆ ನಿಯೋಜನೆಗೊಂಡಿದ್ದ ಹೊಸಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾವ್ ಗಣೇಶ್ ಅವರಿಗೆ ಸಿಕ್ಕಿದೆ, ಜನರ ನಡುವೆ ಪೋಷಕರಿಗಾಗಿ ಕಣ್ಣೀರಿಡುತ್ತಿದ್ದ ಮಗುವನ್ನ ಸಂತೈಸಿ, ಮಗುವಿನ ಬಳಿ ಮಾಹಿತಿ ಕಲೆ ಹಾಕಿ ತಾಯಿಯ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ನಗರದ ಕರೇನಹಳ್ಳಿಯ ಅಲ್ಫಾ (3), ಕಳೆದು ಹೋಗಿದ್ದ ಮಗು.
ಇನ್ಸ್ಪೆಕ್ಟರ್ ಸಮಯಪ್ರಜ್ಞೆ ಹಾಗೂ ಮಾನವೀಯತೆಗೆ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೂ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ಸ್ ಪೆಕ್ಟರ್ ರಾವ್ ಗಣೇಶ್ ಅವರಿಗೆ ಗೆ ಸಿಬ್ಬಂದಿ ಚಂದ್ರಶೇಕರ್ ಸಹಾಯ ಮಾಡಿದ್ದಾರೆ.