ನಗರಸಭೆ ಪಾರ್ಕಿನಲ್ಲಿ(ಮೈ.ತಿ.ಶ್ರೀಕಂಠಯ್ಯ ಉದ್ಯಾನವನ) ದುಷ್ಕರ್ಮಿಗಳ ಅಟ್ಟಹಾಸ: ಕಡಪಾ ಕಲ್ಲುಗಳನ್ನು ಕೆಳಗೆ ಉರುಳಿಸಿ ಸೈಜ್ ಕಲ್ಲಿಂದ ಜಜ್ಜಿ ಧ್ವಂಸ

ನಗರಸಭೆ ಪಾರ್ಕಿನಲ್ಲಿ ಕುಳಿತುಕೊಳ್ಳುವ ಖುರ್ಚಿಗಳನ್ನು ಪುಂಡ ಪೋಕರಿಗಳು ಹೊಡೆದುರುಳಿಸಿ ಕುಕೃತ್ಯ ಮೆರೆದಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬರ್ತಡೆ ಪಾರ್ಟಿ ಮಾಡಿ ಸುಮ್ಮನೆ ಹೋಗದೇ ಕಡಪಾ ಕಲ್ಲುಗಳನ್ನು ಕೆಳಗೆ ಉರುಳಿಸಿ ಸೈಜ್ ಕಲ್ಲಿಂದ ಜಜ್ಜಿ ಧ್ವಂಸ ಮಾಡಿ ಪುಂಡಾಟಿಕೆ ಮೆರೆದಿದ್ದಾರೆ.

ಸುಮಾರು 6-7 ಕಡಪ ಕಲ್ಲುಗಳನ್ನು ನಾಶ ಮಾಡಿದ್ದಾರೆ. ಘಟನೆ ನಡೆದು ಸುಮಾರು ಎರಡು ವಾರ ಕಳೆದರೂ ಈ‌ ಕುರಿತು ಪೊಲೀಸ್ ಠಾಣೆಗೆ ದೂರು ನೀಡದೆ ನಗರಸ‌ಭೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.

ಈ ಕುರಿತು ನಗರಸಭೆ ಪೌರಾಯುಕ್ತ ಕೆ.ಪರಮೇಶ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಂಡಿದ್ದಾರೆ. ಉದ್ಯಾನವನದಲ್ಲಿ ಸಿಸಿಟಿವಿ ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳ ಇಲ್ಲದೇ ಇರುವುದು ಎದ್ದು ಕಾಣುತ್ತಿದೆ.

Leave a Reply

Your email address will not be published. Required fields are marked *