ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ದಾಖಲೆ ರಹಿತ 37.5 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿದ್ದ ಆರ್ಪಿಎಫ್ ಸಿಬ್ಬಂದಿ, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಲಕ್ಷ್ಮಣ್ ರಾಮ್ (45) ಎಂಬ ವ್ಯಕ್ತಿಯನ್ನು ಪ್ಲಾಟ್ಫಾರ್ಮ್ ಸಂಖ್ಯೆ 1 ರ ಮಧ್ಯದ ಫುಟ್-ಓವರ್ ಸೇತುವೆಯ ಗೇಟ್ ಸಂಖ್ಯೆ 3 ರ ಬಳಿ ತಪಾಸಣೆ ನಡೆಸಿದಾಗ ಬ್ಯಾಗ್ ನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ. ಕೂಡಲೇ ಬ್ಯಾಗ್ ನೊಂದಿಗೆ ವ್ಯಕ್ತಿಯನ್ನ ಬಂಧಿಸಿಲಾಗಿದೆ.
ವಿಚಾರಣೆಯ ನಂತರ, ಲಕ್ಷ್ಮಣ್ ರಾಮ್ ಅವರು ಯಾವುದೇ ದಾಖಲೆಗಳನ್ನು ತೋರಿಸಲಿಲ್ಲ ಮತ್ತು ನಗದು ಬಗ್ಗೆ ಸೂಕ್ತ ವಿವರಣೆಯನ್ನು ನೀಡಲು ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.