ಲಲಾಜಿಸ್ಟಿಕ್ಸ್ ಕಂಪನಿ ಮೇಲೆ ದಾಳಿ ನಡೆಸಿದ ಇಡಿ. ವಾಷಿಂಗ್ ಮಷಿನ್‌ನಲ್ಲಿ ಸುಮಾರು 2.54 ಕೋಟಿ ರೂ. ಹಣ ಪತ್ತೆಯಾಗಿದೆ. ಕೂಡಲೇ ಆ ಹಣವನ್ನ ಇಡಿ ವಶಪಡಿಸಿಕೊಂಡಿದೆ.
ವಿದೇಶಿ ವಿನಿಮಯ ಕಾನೂನು ಉಲ್ಲಂಘನೆಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ಹಲವು ನಗರಗಳಲ್ಲಿ ನಡೆಸಿದ ಶೋಧದ ವೇಳೆ ಜಾರಿ ನಿರ್ದೇಶನಾಲಯವು ದಾಖಲೆ ಇಲ್ಲದ ಕೋಟ್ಯಂತರ ಹಣವನ್ನ ವಶಪಡಿಸಿಕೊಂಡಿದೆ.
ಶೋಧನೆಗಳ ಸಮಯದಲ್ಲಿ, ವಿವಿಧ ದೋಷಾರೋಪಣೆಯ ದಾಖಲೆಗಳು, ಡಿಜಿಟಲ್ ಸಾಧನಗಳು ಮತ್ತು ದಾಖಲೆ ಇಲ್ಲದ ನಗದು ಪತ್ತೆಯಾಗಿದ್ದು, ಅವುಗಳನ್ನ ವಶಪಡಿಸಿಕೊಳ್ಳಲಾಗಿದೆ, 47 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇಡಿ ತಿಳಿಸಿದೆ.