ತಾಲೂಕಿನ ಚಿಕ್ಕಹೆಜ್ಜಾಜಿ ಗ್ರಾಮದಲ್ಲಿ ತಡ ರಾತ್ರಿ ಒಂದೇ ದಿನ ಕೆಂಪಾಜಮ್ಮ, ಬಸವಣ್ಣ, ಮಾರಮ್ಮ ದೇವಾಲಯಗಳಲ್ಲಿ ಹುಂಡಿ ಕಳವು ಮಾಡಿ ಪರಾರಿಯಾದ ಕಳ್ಳರು.
ದೇವಾಲಯಗಳ ಬಾಗಿಲುಗಳನ್ನು ಮೀಟಿ ಹುಂಡಿಗಳನ್ನು ಹೊಡೆದು ಹಣ ದೋಚಿ ಪರಾರಿಯಾಗಿರುವ ಕಳ್ಳರು.
ಬಸವಣ್ಣ ದೇವರ ಹುಂಡಿಯಲ್ಲಿ ಒಂದು ಲಕ್ಷ 20ಸಾವಿರ, ಕೆಂಪಾಜಮ್ಮ ದೇವರ ಹುಂಡಿಯಲ್ಲಿ ಒಂದು ಲಕ್ಷ ಎಗರಿಸಿದ ಕಳ್ಳರು. ಕೆಂಪಾಜಮ್ಮ ಮತ್ತು ಬಸವಣ್ಣ ದೇವಾಲಯದಲ್ಲಿ ಇದ್ದ ಸಿಸಿಟಿವಿ ಕೇಬಲ್ ಕಟ್ ಮಾಡಿ ಕಳ್ಳತನ ಎಸಗಿರುವ ಕಳ್ಳರು.
ಇಂದು ಬೆಳಗ್ಗೆ ಗ್ರಾಮಸ್ಥರ ಕಣ್ಣಿಗೆ ಕಳ್ಳತನ ನಡೆಸಿರುವ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.