ತನ್ನ ಸಾಕುನಾಯಿಯನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ 20 ಬೀದಿ ನಾಯಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಕಿರಾತಕ

ತೆಲಂಗಾಣದ ಮಹಬೂಬ್‌ನಗರ ಜಿಲ್ಲೆಯ ಪೊನ್ನಕಲ್ ಗ್ರಾಮದಲ್ಲಿ ಬೀದಿನಾಯಿಗಳ ಗುಂಪನ್ನು ಕೊಂದ ಆರೊಪದ‌ ಮೇಲೆ ಹೈದರಾಬಾದ್‌ನ ಶೂಟರ್ ಸೇರಿದಂತೆ ಮೂವರನ್ನು ಅಡ್ಡಂಕಲ್ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಫೆಬ್ರವರಿ ಆರಂಭದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಬೀದಿನಾಯಿಗಳು ಕೊಂದ ನಂತರ ಆರೋಪಿಗಳು ಫೆಬ್ರವರಿ 16 ರಂದು 20 ಬೀದಿ ನಾಯಿಗಳನ್ನು ಕೊಂದು ಸೇಡು ತೀರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

57 ವರ್ಷದ ರೈತ ಮಂದಾ ನರಸಿಂಹ ರೆಡ್ಡಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಶೂಟರ್ ತಾರೀಕ್ ಅಹ್ಮದ್ (42) ಮತ್ತು ಜಿಮ್ ಮಾಲೀಕ ಮೊಹಮ್ಮದ್ ತಾಹೆರ್ (40) ಅವರಿಗೆ ಸಹಾಯ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ತಿಳಿಸಿದ್ದಾರೆ.  ನರಸಿಂಹ ರೆಡ್ಡಿ ಅವರು ಬೀದಿನಾಯಿಗಳನ್ನು ಕೊಲ್ಲಲು ತಾರೀಕ್ ಅವರ ಪರವಾನಗಿ ಪಡೆದ ಎ.22 ರೈಫಲ್ ಅನ್ನು ಬಳಸಿದ್ದರು ಎನ್ನಲಾಗಿದೆ.

ನರಸಿಂಹ ರೆಡ್ಡಿ ಅವರ ಅತ್ತೆಯ ಮನೆಗೆ ಭೇಟಿ ನೀಡಿದ್ದರು, ಅಲ್ಲಿ ಬೀದಿ ನಾಯಿಗಳು ಫೆಬ್ರವರಿ ಮೊದಲ ವಾರದಲ್ಲಿ ಅವರ ಸಾಕು ನಾಯಿ ಮಿಂಟುವನ್ನು ಕೊಂದು ಮತ್ತೊಂದು ಸಾಕು ನಾಯಿ ಜೇಡ್ ಅನ್ನು ಗಾಯಗೊಳಿಸಿದ್ದವು.

ನಂತರ, ಫೆಬ್ರವರಿ 16 ರ ಮುಂಜಾನೆ, ನರಸಿಂಹ ರೆಡ್ಡಿ ಸೇರಿ ಮೂವರು ನಾಯಿಗಳ ಗುಂಪಿನ‌ ಮೇಲೆ ಗುಂಡಿನ ದಾಳಿ ನಡೆಸಿದರು.

ಸದ್ಯ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು‌ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *