ಕಾರಂಜಿಕಟ್ಟೆಯ ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ

ಕೋಲಾರ: ನಗರವನ್ನು ನೈರ್ಮಲ್ಯದಿಂದ ಕಾಪಾಡಲು ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಅಗತ್ಯವಾಗಿದ್ದು ಅದಕ್ಕೆ ಬೇಕಾದ ಅನುದಾನವು ರಾಜ್ಯ ಸರಕಾರದಲ್ಲಿ ಕೊರತೆಯಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.

ನಗರದ ಕಾರಂಜಿಕಟ್ಟೆಯ 7 ನೇ ಕ್ರಾಸ್ ನಲ್ಲಿ ಶುಕ್ರವಾರ ಸಂಜೆ ಸುಮಾರು 32 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಡವರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾ ಇದೆ. ಕೊಟ್ಟ ಅನುದಾನವನ್ನು ಸಹ ಸಮರ್ಪಕವಾಗಿ ಬಳಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಭಿವೃದ್ಧಿಗೆ ಸಾಕಷ್ಟು ಅನುದಾನವು ಹರಿದು ಬರುತ್ತಿರುವುದರಿಂದ ಬಹುತೇಕವಾಗಿ ನಗರದ ಖಾಲಿ ಇರುವ ಸಿಸಿ ರಸ್ತೆ ಇತರೆ ಕಾಮಗಾರಿಗಳು ನಡೆಯಲಿದ್ದು , ಕಾಮಗಾರಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಲಕ್ಷ್ಮೀದೇವಮ್ಮ, ಗುಣಶೇಖರ್, ಮಂಜುನಾಥ್, ಮಾಜಿ ಸದಸ್ಯ ಚಂದ್ರಮೌಳಿ ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಕುರಿಗಳ ರಮೇಶ್, ಆನಂದ್ ಕುಮಾರ್, ಮುನಿನಾರಾಯಣಪ್ಪ, ಶಾಂತಿನಗರ ಕೃಷ್ಣ, ಶ್ರೀನಾಥ್, ಕಿಲಾರಪೇಟೆ ಮಣಿ, ಸುಮನ್, ಮುಂತಾದವರು ಇದ್ದರು

Leave a Reply

Your email address will not be published. Required fields are marked *